Header Ads
Header Ads
Breaking News

ತನಗೆ ಸಿಕ್ಕ 7ಪವನ್ ಚಿನ್ನಾಭರಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಬೀರ್..!

ರಸ್ತೆಯಲ್ಲಿ ಹೋಗುವಾಗ ದುಡ್ಡಿರುವ ಪರ್ಸ್ ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕರೆ ಅದನ್ನ ಹಿಂದಿರುಗಿಸೋರ ಸಂಖ್ಯೆ ತುಂಬಾ ವಿರಳ. ಆದ್ರೆ ಇಲ್ಲೊಬ್ಬ ಶಬೀರ್ ಅನ್ನೋ ವ್ಯಕ್ತಿ ತನಗೆ ಸಿಕ್ಕ 7ಪವನಿನ ಚಿನ್ನಾಭರಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾನೆ. ತನಗೆ ಸಿಕ್ಕ ಏಳು ಪವನಿನ ಚಿನ್ನಾಭರಣವನ್ನು ಉಳ್ಳಾಲ ಪೊಲೀಸ್ ಸ್ಟೇಷನ್‍ನ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ಅದನ್ನು ಕಳಕೊಂಡವರಿಗೆ ನೀಡುವಂತೆ ಹೇಳಿದ್ದಾರೆ. ಬಳಿಕ ಉಳ್ಳಾಲ ಪೊಲೀಸರು ಚಿನ್ನಾಭರಣವನ್ನು ಅದರ ಮಾಲೀಕರಿಗೆ ಆಭರಣವನ್ನು ಹಸ್ತಾಂತರಿಸಿದ್ದಾರೆ. ಚಿನ್ನಾಭರಣಕ್ಕಾಗಿ ಕೊಲೆಯನ್ನೇ ಮಾಡುವಂತಹ ಈ ಕಾಲದಲ್ಲೂ ಶಬ್ಬೀರ್ ಅಂತಹ ವ್ಯಕ್ತಿಗಳು ಇರೋದು ಅಪರೂಪ ಎಂದು ಚಿನ್ನಾಭರಣ ಮಾಲೀಕರು ಹೇಳಿದ್ದಾರೆ. ಅವರಿಗೆ ಏನಾದರೂ ಉಡುಗೊರೆ ಕೊಡುವುದಾಗಿ ಹೇಳಿದಾಗಲೂ ನಯವಾಗಿ ನಿರಾಕರಿಸಿ ನನಗೆ ದೇವರು ಆರೋಗ್ಯ ಮತ್ತು ಶಕ್ತಿಯನ್ನು ಕರುಣಿಸಿದ್ದಾರೆ. ಆದ್ದರಿಂದ ದುಡಿದು ಜೀವಿಸುತ್ತೇನೆ. ನಾನು ಇಂಟರ್ಲಾಕ್ ಅಳವಡಿಸುವ ವೃತ್ತಿಯನ್ನು ಮಾಡುತ್ತಿದ್ದೇನೆ, ನಿಮಗೆ ನನಗೆ ಸಹಾಯ ಮಾಡುವ ಮನಸಿದ್ದರೆ ನಿಮ್ಮಲ್ಲಿ ಯಾರಿಗಾದರೂ ಇಂಟರ್‍ಲಾಕ್ ಅಳವಡಿಸುವ ಅಗತ್ಯವಿದ್ದರೆ ನನ್ನನ್ನು ಸಂಪರ್ಕಿಬಹುದಾಗಿದೆ ಎಂದು ನಯವಾಗಿ ಉತ್ತರಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಶಬೀರ್ ಅವರ ಸಂಪರ್ಕ ಸಂಖ್ಯೆ 7829019647 ಆಗಿದ್ದು, ಇವರಿಗೆ ಕೆಲಸವನ್ನು ಕೊಟ್ಟರೆ ಅತ್ಯಂತ ಪ್ರಾಮಾಣಿಕತೆಯಿಂದ ಅದನ್ನು ನಡೆಸಿ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ..

Related posts

Leave a Reply

Your email address will not be published. Required fields are marked *