Header Ads
Breaking News

ತನ್ನದೇ ದಾಖಲೆ ಮುರಿದ ಯೋಗ ಬಾಲೆ ತನುಶ್ರೀ

ಯೋಗದಲ್ಲಿ ಗಿನ್ನಿಸ್ ದಾಖಲೆಗೈದ ಉಡುಪಿಯ ಯೋಗ ಬಾಲೆ ತನುಶ್ರೀ ತನ್ನ ದಾಖಲೆಯನ್ನು ತಾನೇ ಮುರಿಯುವ ಪ್ರಯತ್ನ ಮಾಡಿದ್ದಾಳೆ. ಈ ಮೂಲಕ ಕಳೆದ ಬಾರಿ ಮೊಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್ ಭಂಗಿಯನ್ನು 1ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಳು. ಮತ್ತೆ ಸತತ ಪರಿಶ್ರಮದ ಮೂಲಕ ಒಂದು ನಿಮಿಷದಲ್ಲಿ ೪೪ ಸುತ್ತು ತಿರುಗಿ ಹೊಸ ಗಿನ್ನಿಸ್ ದಾಖಲೆಗೆ ಪ್ರಯತ್ನ ಮಾಡಿದ್ದಾಳೆ. ಈ ಕಾರ್ಯಕ್ರಮದ ವಿಡಿಯೋ ದಾಖಲೀಕರಣ ಮಾಡಿ ಕಳುಹಿಸುವಂತೆ ಗಿನ್ನಿಸ್ ದಾಖಲೆ ಕಂಪೆನಿ ಆದೇಶಿಸಿತ್ತು. ಅದರಂತೆ ಸೈಂಟ್ ಸಿಸಿಲೀಸ್ ಶಾಲೆಯ ಸಭಾಂಗಣದಲ್ಲಿ ನೂತನ ಗಿನ್ನಿಸ್ ದಾಖಲೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ದಾಖಲಿಸಲಾಯಿತು. ಇನ್ನೊಂದು ತಿಂಗಳಲ್ಲಿ ನೂತನ ದಾಖಲೆಯ ಪ್ರಮಾಣ ಪತ್ರ ಗಿನ್ನಿಸ್ ಸಂಸ್ಥೆ ನೀಡಲಿದೆ. ನಗರದ ಸೈಂಟ್ ಸಿಸಿಲಿಸ್ ಶಾಲೆಯ ಸಭಾಂಗಣದಲ್ಲಿ ದಾಖಲೀಕರಣ ಕಾರ್ಯಕ್ರಮ ನಡೆಯಿತು.

Related posts

Leave a Reply

Your email address will not be published. Required fields are marked *