Breaking News

ತಮಿಳುನಾಡು ಸಮೀಪ ಭೀಕರ ಅಪಘಾತ : ಒಂದೇ ಕುಟುಂಬದ 7 ಮಂದಿಯ ಸಾವು : ಇಂದು ಮಂಗಳೂರಿಗೆ ಆಗಮಿಸಿದ ಮೃತದೇಹ

ತಮಿಳುನಾಡಿನ ಕರೂರು ಸಮೀಪ ಸಂಭವಿಸಿದ ವಾಹನ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದು ಇಂದು ಬೆಳಗ್ಗೆ ಅವರ ಮೃತದೇಹಗಳನ್ನು ಮಂಗಳೂರಿಗೆ ತರಲಾಯಿತು. ಮೂರು ಆಂಬುಲೆನ್ಸ್ ಗಳಲ್ಲಿ ಮೃತದೇಹಗಳನ್ನು ತರಲಾಗಿದ್ದು ಕಂಕನಾಡಿ ಫಾ. ಮುಲ್ಲರ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಂಡೆಕಾಪಿನ ಹೆರಾಲ್ಡ್ ಮೊಂತೇರೊವರ ಪುತ್ರ ರೋ ಷನ್ ಮೃತದೇಹದ ವಾಹನದಲ್ಲಿದರು. ನಾಳೆ ಅಂದರೆ ಸೋಮವಾರ ಮಧ್ಯಾಹ್ನ ೩ಗಂಟೆಗೆ ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ವೆಲಂಕಣಿ ಪುಣ್ಯ ಕ್ಷೇತ್ರಕ್ಕೆ ತೆರಳಿ ಮರಳುತ್ತಿದ್ದಾಗ ಲಾರಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು. ಗಾಯಗೊಂಡಿರುವ ಮೃತಪಟ್ಟ ಸತೂರಿನ್‌ರ ಪತ್ನಿ ಜೇ ಷ್ಮಾ, ಪುತ್ರಿ ಶಾನ್ವಿ, ಆಲ್ವಿನ್ ರ ಪತ್ನಿ ಪ್ರೀಮಾ ಕರೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

Leave a Reply