Header Ads
Breaking News

ತಮ್ಮ ಮನೆಯಲ್ಲೇ ಇಫ್ತಾರ್ ಕೂಟ ಮಾಡುವ ಮೂಲಕ ಸೌಹಾರ್ದತೆ ಮೆರೆದ ಮುಂಬೈ ಉದ್ಯಮಿ ಲೋಕನಾಥ್ ಮುತ್ತಪ್ಪ ಶೆಟ್ಟಿ

ಕೋಮು ಸೌಹಾರ್ದತೆ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿಟ್ಲದ ಹಿಂದೂ ಧರ್ಮೀಯರೊಬ್ಬರು ಸ್ವತಃ ಅವರ ಮನೆಯಲ್ಲಿಯೇ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸುವುದರ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ, ಮುಂಬೈ ಉದ್ಯಮಿ ಲೋಕನಾಥ್ ಮುತ್ತಪ್ಪ ಶೆಟ್ಟಿ ಅವರು ತನ್ನದೇ ಮನೆಯಲ್ಲಿ ವಿಶಾಲವಾದ ಚಪ್ಪರ ಅಳವಡಿಸಿ ಇಫ್ತಾರ್ ಕೂಟ ಆಯೋಜಿಸಿದ್ದರು. ಇಫ್ತಾರ್‌ಗೆ ಬೇಕಾದ ಎಲ್ಲಾ ತಿಂಡಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸಿದ್ದರು.

ವಿವಿಧ ಬಗೆಯ ಪಾನೀಯಗಳು, ಹಣ್ಣು ಹಂಪಲು, ರೊಟ್ಟಿ ಮೊದಲಾದವುಗಳನ್ನು ಸಿದ್ಧಪಡಿಸಲಾಗಿತ್ತು. ಕುಂಡಡ್ಕ ಸೇರಿದಂತೆ ವಿಟ್ಲ, ಕಂಬಳಬೆಟ್ಟು, ಚಂದಳಿಕೆ, ಕಬಕ ಮೊದಲಾದ ಕಡೆಗಳಿಂದ ನೂರಾರು ಮುಸ್ಲಿಮರು ಆಗಮಿಸಿ ಈ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭ ಮುತ್ತಣ್ಣ, ಲೋಕನಾಥ್ ಮುತ್ತಪ್ಪ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *