Header Ads
Header Ads
Breaking News

ತಲಪಾಡಿ:ಮಂಗಳೂರಿನ ಪ್ರಪ್ರಥಮ ಸುಸಜ್ಜಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪುನಃ ಸಮರ್ಪಣಾ ಸಮಾರಂಭ

ತುಳುನಾಡ್ ಎಜ್ಯುಕೇಶನ್ ಟ್ರಸ್ಟ್ ಅಧೀನದ ತಲಪಾಡಿ ದೇವಿನಗರದ ಶಾರದಾ ಆಯರ್ಧಾಮ ನಲ್ಲಿರುವ ಮಂಗಳೂರಿನ ಪ್ರಪ್ರಥಮ ಸುಸಜ್ಜಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಪುನಃ ಸಮರ್ಪಣಾ ಸಮಾರಂಭ ಕಾರ್ಯಕ್ರಮ ಆಸ್ಪತ್ರೆಯ ವಠಾರದಲ್ಲಿ ನಡೆಯಿತು.ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪದ್ಮವಿಭೂಷಣ ಡಾ.ಬಿ.ಎಂ.ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಕಾಯಿಲೆ ಇದೆಯೆಂದು ಹೆದರಬೇಡಿ, ಯಾಕೆಂದರೆ ಕಾಯಿಲೆಯಿಂದ ಜನ ಸಾಯುವುದಿಲ್ಲ. ನಾವು ಧೈರ್ಯದಿಂದ ಇದ್ದರೆ ಕಾಯಿಲೆ ನಮ್ಮನ್ನು ನೋಡಿ ಹೆದರಿ ಓಡುತ್ತದೆ. ಕೆಲವು ವೈದ್ಯರು ರೋಗಿಗಳನ್ನು ಹೆದರಿಸಿಯೇ ಕೊಲ್ಲುತ್ತಾರೆ. ವೈದ್ಯರಿಗೆ ಪಿಎಚ್ ಡಿಗಿಂತ ಒಳ್ಳೆಯ ಮನುಷ್ಯತ್ವ ಅಗತ್ಯ. ಕಾಯಿಲೆ ಇದ್ದರೂ ಬೆನ್ನುತಟ್ಟಿ ಧೈರ್ಯ ಹೇಳಿದಾಗ ದೊಡ್ಡ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ತುಳುನಾಡು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಚಿಂತನೆಯಲ್ಲಿ ಏನೆಲ್ಲಾ ಬರುತ್ತದೋ ಅದೆಲ್ಲವನ್ನೂ ಶಾರದಾ ವಿದ್ಯಾಲಯದಲ್ಲಿ ನೀಡಲಾಗುತ್ತಿದೆ. ಇಂದು ನಾಯಿಕೊಡೆಗಳಂತೆ ವಿದ್ಯಾಸಂಸ್ಥೆಗಳ ವ್ಯಾಪಾರೀಕರಣ ಆಗುತ್ತಿದ್ದರೂ ಶಾರದಾ ವಿದ್ಯಾಸಂಸ್ಥೆ ತನ್ನ ಗುಣಮಟ್ಟ ಕಾಯ್ದುಕೊಂಡಿದೆ. ವಿದ್ಯಾರ್ಥಿಗಳು ಹಣ ಸಂಪಾದನೆಗಾಗಿ ವಿದೇಶಕ್ಕೆ ಹೋಗುವ ಕನಸು ಬಿಟ್ಟು ದೇಶದಲ್ಲೇ ಇದ್ದು ಡಾ.ಬಿ.ಎಂ.ವೈದ್ಯರನ್ನು ಮಾದರಿಯಾಗಿಟ್ಟುಕೊಂಡು ಜನರ ಸೇವೆ ಮಾಡಲು ಮುಂದಾಗಿ ಎಂದು ಕರೆ ನೀಡಿದರು.ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೆಕಲ್ಲು ಚಿಕಿತ್ಸೆಗಳನ್ನು ಪರಿಚಯಿಸಿದರು. ಬಂಟ್ವಾಳ ರಘುನಾಥ ಸೋಮಯಾಜಿ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಶಾರದ ಆಸ್ಪತ್ರೆಯ ಸೌಲಭ್ಯ ಗಳ ಕುರಿತಾದ ವಿರರಗುಳುಳ್ಳ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ತುಳುನಾಡು ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಟ್ರಸ್ಟಿ ಎಚ್.ಸೀತಾರಾಮ , ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಸುಶ್ಮಿತಾ, ಶಾರದಾ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ವಿವೇಕ್ ತಂತ್ರಿ ಹಾಗೂ ಡಾ.ವಿದ್ಯಾ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply