Header Ads
Header Ads
Breaking News

ತಲಪಾಡಿಯಲ್ಲಿ ದೇವೆರೆ ಬಾಕಿಲ್ದ ಕಂಡಡೊಂಜಿ ದಿನ .ಹಳ್ಳಿ ತಿಂಡಿ ತಿನಿಸು ತಿಂದು ಖುಷಿಪಟ್ಟ ಜನತೆ.

ಕರಾವಳಿಯಲ್ಲಿ ಸದ್ಯ ಆಟಿ ಕಾಲ. ಆಷಾಢ ಎಂಬ ಆಟಿ ತಿಂಗಳಲ್ಲಿ ಕರಾವಳಿಯ ಹೆಚ್ಚಿನ ಕಡೆ ಯಾವುದೇ ಶುಭ ಕಾರ್ಯಗಳು ನಡೆಯಲ್ಲ. ಆದ್ರೆ ಆಟಿ ಹೆಸರಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.    


ಆಟಿ ಮಾಸದ ಹಿನ್ನೆಲೆಯಲ್ಲಿ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಯುವಕ ಮಂಡಳ ದೇವಿಪುರ ಇದರ ಆಶ್ರಯದಲ್ಲಿ ’ದೇವೆರೆ ಬಾಕಿಲ್ದ ಕಂಡಡೊಂಜಿ ದಿನ’ ಕಾರ್ಯಕ್ರಮ ನಡೆಯಿತು. ಈ ವೇಳೆ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಊರ ಜನರು ಹಳ್ಳಿ ಆಟವಾಡಿ ಸಂಭ್ರಮಿಸಿದರು. ಜೊತೆಗೆ ಹಳ್ಳಿ ತಿಂಡಿ ತಿನಿಸುಗಳನ್ನು ತಿಂದು ಖುಷಿಪಟ್ರು. ಕೆಸರು ಗದ್ದೆಯಲ್ಲಿ ಮಕ್ಕಳು, ಮಹಿಳೆಯರು ಕೆಸರಲ್ಲಿ ಅಡುವುದರ ಮೂಲಕ ಸಂಭ್ರಮ ಹಂಚಿಕೊಂಡರು. ಕೆಸರುಗದ್ದೆಯಲ್ಲಿ ವಾತಾವರಣ ಹಬ್ಬದ ರೀತಿಯಂತಿತ್ತು.

Related posts

Leave a Reply