Header Ads
Header Ads
Breaking News

ತಲಪಾಡಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಸಮಾಜದ ಜನರ ನೆಮ್ಮದಿಯ ಬದುಕಿಗಾಗಿ ಸರ್ಕಾರದ ಯೋಜನೆ ಸಚಿವ ಯು.ಟಿ.ಖಾದರ್ ಅಭಿಪ್ರಾಯ

ಉಳ್ಳಾಲ: ಸರಕಾರ ಹಕ್ಕುಪತ್ರ ನೀಡುವ ಮೂಲಕ ಸಮಾಜದ ಜನರು ನೆಮ್ಮದಿಯ ಜೀವನ ನಡೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಬೆಳೆಬಾಳುವ ಒಂದು ಸಂಪತ್ತಾಗಿ ಅವರು ಉನ್ನತ ಶಿಕ್ಷಣ ಪಡೆದು ಒಂದು ಕ್ರಾಂತಿಕಾರಿ ಬದಲಾವಣೆ ತರುವ ಕಾರ್ಯ ಆಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅವರು ತಲಪಾಡಿ ಗ್ರಾಮದ ಪಿಲಿಕೂರು ಬಳಿ ತಲಪಾಡಿ ಮತ್ತು ಕಿನ್ಯ ಗ್ರಾಮದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಸರಕಾರ ನೀಡುವ ಹಕ್ಕುಪತ್ರ ಮುಂದಿನ ದಿನಗಳಲ್ಲಿ ಇದರ ಮೌಲ್ಯ ದುಪ್ಪಾಟ್ಟಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ಹಕ್ಕು ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ತೆಗೆದುಕೊಳ್ಳುವ ಕಾರ್ಯ ಮಾಡಬಾರದು ಮುಂದಿನ ದಿನಗಳಲ್ಲಿ ಈ ಹಕ್ಕು ಪತ್ರ ಮಕ್ಕಳಿಗೆ ಒಂದು ಸಂಪತ್ತಾಗಿದ್ದು ಆದನ್ನು ಜತನದಲ್ಲಿ ಕಾಯುವ ಕೆಲವನ್ನು ಮಾಡಬೇಕು ಎಂದರು.ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರಕಾರ ಇರುವಾಗ ಹಕ್ಕುಪತ್ರ ನೀಡಿತ್ತು ಇದೀಗ ಸಿದ್ಧರಾಮಯ್ಯರ ನೇತೃತ್ವದಲ್ಲಿ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಇದರೊಂದಿಗೆ ಅನ್ನಭಾಗ್ಯ, ಮಕ್ಕಳಿಗೆ ಸಮವಸ್ತ್ರ, ಶೂಭಾಗ್ಯ ಸೇರಿದಂತೆ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದ್ದು, ಈ ಅವಧಿಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಮುಂದಿನ ಅವಧಿಯಲ್ಲಿ 24ಗಂಟೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದರು.
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸೋಮೇಶ್ವರ ಗ್ರಾಮ ಪಂಚಾಯತ್‌ನ 278 ಫಲಾನುಭವಿಗಳಿಗೆ, ಕೋಟೆಕಾರು ಗ್ರಾಮ ಪಂಚಾಯತ್‌ನ 296ಫಲಾನುಭವಿಗಳಿಗೆ, ತಲಪಾಡಿ ಗ್ರಾಮ ಪಂಚಾಯತ್‌ನ 305 ಫಲಾನುಭವಿಗಳಿಗೆ ಮತ್ತು ಕಿನ್ಯ ಗ್ರಾಮದ 233 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕಾಂಗ್ರೆಸ್ ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷ ಎನ್.ಎಸ್. ಕರೀಂ, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯರಾದ ಸಿದ್ಧಿಖ್ ತಲಪಾಡಿ, ಸುರೇಖಾ ಚಂದ್ರಹಾಸ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಮುಸ್ತಾಫ, ಸಂಘಟನಾ ಕಾರ್ಯದರ್ಶಿ ಸಲೀಂ ಮೇಘಾ, ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ನಾರಾಯಣ ಪೂಜಾರಿ, ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಅಬ್ಬುಸಾಲಿ ಕಿನ್ಯ, ಹಮೀದ್ ಕಿನ್ಯ, ಮಹಾಬಲ ಪೂಂಜಾ, ಫಾರೂಕು ಕಿನ್ಯ, ಫಯಾಝ್, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವೈಭವ್, ವಿನು, ಝುಬುನ್ನಿಸಾ, ಬಿ.ಎಸ್.ಇಸ್ಮಾಯಿಲ್, ಸಲಾಂ, ಇಬ್ರಾಹಿಂ, ಮಕ್ಯಾರ್ ಅಬ್ದುಲ್ ಖಾದರ್, ಫಯಾಝ್, ಸಚ್ಚಿದಾನಂದ ಭಂಡಾರಿ, ಮಾಜಿ ಅಧ್ಯಕ್ಷ ಖಾದರ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply