Header Ads
Breaking News

ತಲಪಾಡಿಯಲ್ಲಿ ಭೀಕರ ಅಪಘಾತ: ಬೈಕ್‌ಗೆ ಬಸ್ ಢಿಕ್ಕಿಯಾಗಿ ಸವಾರ ಮೃತ್ಯು

ಮಂಜೇಶ್ವರ: ಅಮಿತವೇಗದಲ್ಲಿ ಆಗಮಿಸಿದ ಕರ್ನಾಟಕ ಸಾರಿಗೆ ಬಸ್ಸೊಂದು ಎದುರಿನಿಂದ ಸಂಚರಿಸುತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಒಬ್ಬ ಸಾವನ್ನಪ್ಪಿದರೆ ಇನ್ನೊರ್ವ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ತಲಪಾಡಿ ಸಮೀಪದ ಮೋಟೆಲ್ ಆರಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಜೋಡು ಕಲ್ಲು ನಿವಾಸಿ ನಾಟಕ ಕಲಾವಿದ ಸುರೇಶ್ ಶೆಟ್ಟಿ ಹಾಗೂ ಆತನ ಸ್ನೇಹಿತ ವಿನೋದ್ ಶೆಟ್ಟಿ ಸಂಚರಿಸುತಿದ್ದ ಬೈಕ್ ಅಪಘಾತಕ್ಕೀಡಾಗಿದೆ. ಈ ಪೈಕಿ ಹಿಂಬದಿ ಸವಾರ ವಿನೋದ್ ಶೆಟ್ಟಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮಂಜೇಶ್ವರ ಭಾಗದಿಂದ ತಲಪಾಡಿ ಕಡೆ ತೆರಳುತ್ತಿರುವಾಗ ಇನ್ನೊಂದು ಬಸ್ಸನ್ನು ಅಮಿತ ವೇಗದಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಸಂಚರಿಸುತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾವಾದ ಕೂಡಲೇ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ಈ ಮಧ್ಯೆ ಅಪಘಾತದ ಗಾಯಾಳುಗಳನ್ನು ಕೊಂಡೊಯ್ಯಲು ಅಂಬ್ಯುಲೆನ್ಸ್‌ಗೆಂದು ಇಬ್ಬರು ಯುವಕರು ತೆರಳಿದ ಕಾರೊಂದು ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ತೂಮಿನಾಡು ನಿವಾಸಿಗಳಾದ ಇಲ್ಯಾಸ್ ಹಾಗೂ ತಮ್ಮಿ ಎಂಬಿಬ್ಬರು ಯುವಕರು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

Related posts

Leave a Reply

Your email address will not be published. Required fields are marked *