Header Ads
Header Ads
Breaking News

ತಲಪಾಡಿಯ ದೇವಿನಗರದ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾ ವಿಭಾಗ ಉದ್ಘಾಟನೆ

ತಲಪಾಡಿಯ ದೇವಿನಗರದ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾ ವಿಭಾಗ ಉದ್ಘಾಟನೆಗೊಂಡಿತು.ದೇರಳಕಟ್ಟೆಯ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ ರಾಜೇಂದ್ರ ಪ್ರಸಾದ್ ದ್ವೀಪ ಬೆಳಗಿಸಿ ದಂತ ಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಇರುವ ಶಾರಾದ ಆಸ್ಪತ್ರೆ ಉತ್ತಮ ಪರಿಸರವನ್ನು ಹೊಂದಿದ್ದು ರೋಗಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಿದರು.

ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಶಾರದಾ ಸಂಸ್ಥೆ ಪ್ರಾಥಮಿಕ ವಿದ್ಯೆ ಹಿಡಿದು ವೈದ್ಯಕೀಯದ ವರೆಗೆ ಶಿಕ್ಷಣ ಮತ್ತು ಸೇವೆ ನೀಡುತ್ತಿದೆ. ಇಲ್ಲಿಯ ಸಿಬ್ಬಂದಿ ಗಳ ನಿರಂತರ ಪ್ರಯತ್ನದಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ರವಿ ಗಣೇಶ್, ತುಳುನಾಡು ಎಜ್ಯುಕೇಶನ್ ಟ್ರಸ್ಟಿ ಎಚ್.ಶಿತಾರಾಮಯ್ಯ, ದಂತ ವೈದ್ಯಕೀ ಡಾ. ನಿವ್ಯ ಬೇಬಿ, ಶಾರದಾ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ಇದರ ಆಡಳಿತ ಅಧಿಕಾರಿ ವಿವೇಕ್ ತಂತ್ರಿ ಉಪಸ್ಥಿತರಿದ್ದರು.

Related posts

Leave a Reply