Header Ads
Header Ads
Breaking News

ತಲಪಾಡಿಯ ಫಲಾಹ್ ಪ್ರೌಢಶಾಲೆಯಲ್ಲಿ ಶಿಕ್ಷಕ-ರಕ್ಷಕರ ಶೈಕ್ಷಣಿಕ ಸಮ್ಮಿಲನ

 ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಮಾಹಿತಿಗಳನ್ನು ಪೊಲೀಸ್ ಇಲಾಖೆಗೆ ನೀಡುವ ಮೂಲಕ ದೇಶದ ಅಭಿವೃದ್ದಿಯ ಮಹತ್ತರಜವಾಬ್ದಾರಿ ವಿದ್ಯಾರ್ಥಿಗಳದಾಗಿದ್ದು, ಆ ಮೂಲಕ ಅವರು ಸಮವಸ್ತ್ರರಹಿತ ಪೊಲೀಸ್ ಅಧಿಕಾರಿಗಳಾಗಿರುತ್ತಾರೆ ಎಂದು ಮಂಗಳೂರು ದಕ್ಷಿಣ ಟ್ರಾಫಿಕ್ ಇನ್ಸ್‌ಪೆಕ್ಟರ್ ಗುರುಕಾಮತ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅವರು ಫಲಾಹ್ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕ -ರಕ್ಷಕರ ಶೈಕ್ಷಣಿಕ ಸಮ್ಮಿಲನ ಹಾಗೂ ಮಾದಕ ವ್ಯಸನಗಳ ದುಷ್ಪಾರಿಣಾಮಗಳು ಮತ್ತುರಸ್ತೆ ಸುರಕ್ಷತಾ ನಿಯಮಗಳ ಮಾಹಿತಿ ಕಾರ್‍ಯಗಾರದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್‍ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
ಉಳ್ಳಾಲ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಶ್ರೀ ಗುರಪ್ಪಕಾಂತಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ೨೫ ವರ್ಷ ಸುದೀರ್ಘ ಸೇವೆ ಮಾಡಿದ ಹಿರಿಯ ಶಿಕ್ಷಕಿ ಶ್ರೀಮತಿ ಲತಾ ಶೆಟ್ಟಿಯನ್ನು ಸನ್ಮಾನಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಸಂಸ್ಥೆಯಅಧ್ಯಕ್ಷ ಹಾಜಿಯು.ಬಿ ಮೊಹಮ್ಮದ್, ಸಂಚಾಲಕರಾದ ಅಡ್ವಕೇಟ್‌ಮುಝಾಫರ್‌ಅಹ್ಮದ್, ಕಾರ್ಯದರ್ಶಿ ಬಶೀರ್ ತಲಪಾಡಿ, ಕೋಶಾಧಿಕಾರಿಇಸ್ಮಾಯಿಲ್ ನಾಗತೋಟ, ಮಾಜಿ ಅಧ್ಯಕ್ಷಅಬ್ಬಾಸ್ ಮಜಲ್, ಮಾಜಿ ಕಾರ್ಯದರ್ಶಿ ಅರಬಿ ಕುಂಞಿ, ಸಂಪನ್ಮೂಲ ವ್ಯಕ್ತಿಯಾಗಿ ಡಿ. ಕೆ. ಎಂಯು ಇದರ ಮಾಜಿ ಅಧ್ಯಕ್ಷರಾದ ಅಬ್ಬಾಸ್‌ಎಸ್ ಉಚ್ಚಿಲ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply