Header Ads
Breaking News

ತಲಪಾಡಿಯ ಶಾರದಾ ಆಸ್ಪತ್ರೆಯಲ್ಲಿ ಪೋಸ್ಟ್ ಕೋವಿಡ್ ಆಯುಷ್ ಕೇರ್ ಸೆಂಟರ್

ತಲಪಾಡಿಯ ಶಾರದಾ ಆಸ್ಪತ್ರೆಯಲ್ಲಿ ಪೋಸ್ಟ್-ಕೋವಿಡ್ ಅಯುಷ್ ಕೇರ್ ಸೆಂಟರ್ ನವೆಂಬರ್ 18ರಂದು ತಲಪಾಡಿಯ ಆಯುರ್ಧಾಮ ಕ್ಯಾಂಪಸ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಹೇಳಿದರು.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಸಂಸ್ಥೆಗಳು ಶೈಕ್ಷನಿಕವಾಗಿರಲಿ ಅಥವಾ ಆರೋಗ್ಯ ಸೇವೆಗಳಾಗಿರಲಿ ಯಾವಾಗಲು ಸಾರ್ವಜನಿಕರ ಅಗತ್ಯತೆಗೆ ಸ್ಪಂದಿಸುತ್ತಾ ಬಂದಿವೆ.ಮಾತ್ರವಲ್ಲದೆ ಕೋವಿಡ್ ಆರಂಭಿಕ ದಿನಗಳಲ್ಲಿ ಶಾರದಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ವತಿಯಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಇದೀಗ ಮತ್ತೊಂದು ಹೆಜ್ಜೆ ಎಂಬಂತೆ ಶಾರದಾ ಆಸ್ಪತ್ರೆಯಲ್ಲಿ ಪೋಸ್ಟ್-ಕೋವಿಡ್ ಅಯುಷ್ ಕೇರ್ ಸೆಂಟರ್‌ನಲ್ಲಿ ನವೆಂಬರ್ 18ರಂದು ಲೋಕಾರ್ಪಣೆಗೊಳಿಸಲಿದ್ದೇವೆ ಎಂದು ಹೇಳಿದರು.
ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಹಾಗೂ ಮುಖ್ಯ ವೈದ್ಯಾಧಿಕಾರಿ ಪ್ರೊ. ಡಾ. ರವಿಗಣೇಶ್ ಮೊಗ್ರ ಅವರು ಮಾತನಾಡಿ, ಇತ್ತೀಚೆಗೆ ಹಲವಾರು ಜನರು ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದಾರೆ ಏಕೆಂದರೆ ಒಂದು ಬಾರಿ ಕೋವಿಡ್ಗೆ ಒಳಗಾದ ವ್ಯಕ್ತಿ ನಾಳೆ ಬದುಕಿ ಬರುತ್ತಾರಾ ಅನ್ನೋ ಭಯ ಜನರಲ್ಲಿ ಇದ್ದು ಇದರಿಂದ ಅನೇಕ ಜನರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಅಂತವರಿಗೆ ಕೌನ್ಸಿಲಿಂಗ್‌ನ ಅಗತ್ಯವಿದೆ ಅದರ ಜೊತೆಗೆ ಅವರ ಸಮಸ್ಯೆಗೆ ಅನುಗುಣವಾಗಿ ಚಿಕಿತ್ಸೆಯನ್ನು ಈ ಸೆಂಟರ್‌ನ ಮೂಲಕ ಹಮ್ಮಿಕೊಂಡಿದ್ದೇವೆ. ಕೆಲವೊಂದು ಔಷದಿಗಳನ್ನು ನಮ್ಮ ಆಸ್ಪತ್ರೆಯಲ್ಲಿಯೇ ತಯಾರು ಮಾಡುತ್ತಿದ್ದೇವೆ ಅದಕ್ಕೆ ಉತ್ತಮವಾದ ಸ್ಪಂದನೆ ಜನರಿಂದ ಸಿಕ್ಕಿದೆ ಎಂದು ಹೇಳಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಹಾಗೂ ಮುಖ್ಯ ವೈದ್ಯಾಧಿಕಾರಿ ಪ್ರೊ.ಡಾ.ರಾಜೇಶ್ ಪಾದೆಕಲ್ ಮಾತನಾಡಿ, ಒಮ್ಮೆ ಕೋವಿಡ್ ಬಂದ ನಂತರ ನಾವು ಯಾವ ರೀತಿಯ ಆಹಾರ ಸೇವಿಸಬೇಕು ಜೊತೆಗೆ ಯಾವ ರೀತಿಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂಬುದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ಉಚಿತವಾಗಿ ನಾವು ಈ ಕೇಂದ್ರದಲ್ಲಿ ನೀಡಲಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾರದಾ ಸಮೂಹ ಅಭಿವೃದ್ಧಿ ಚಟುವಟಿಕೆಯ ಮುಖ್ಯ ಆಡಳಿತಾಧಿಕಾರಿ ಸಮೀರ್ ಪುರಾಣಿಕ್ ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು

Related posts

Leave a Reply

Your email address will not be published. Required fields are marked *