Header Ads
Breaking News

ತಲಪಾಡಿ ಗಡಿಯಲ್ಲಿ ಪ್ರಯಾಣಿಕರಿಗೆ ಕಿರುಕುಳ

ಮಂಜೇಶ್ವರ: ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಅಂತರ್‍ರಾಜ್ಯ ಪ್ರಯಾಣಿಕರಿಗೆ ಇನ್ನೂ ಕಿರುಕುಳವನ್ನು ನೀಡುತ್ತಿರುವ ಕಾಸರಗೋಡು ಜಿಲ್ಲಾಡಳಿತದ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿಯ ವತಿಯಿಂದ ಗಡಿ ಉಲ್ಲಂಘನಾ ಆಂದೋಲನದ ಮುಂದುವರಿದ ಭಾಗವಾಗಿ ಭಾರಿ ತೀವೃತೆಯ ಪ್ರತಿಭಟನೆ ನಡೆಯಿತು.

ಇಂದಿನಿಂದ ಲಾಕ್‍ಡೌನ್4.0 ಪ್ರಾರಂಭಗೊಂಡಿದೆ. ಕೇಂದ್ರ ಸರಕಾರ ಈ ಮೊದಲೇ ಎಲ್ಲಾ ರಾಜ್ಯಗಳಿಗೂ ಗಡಿ ತೆರೆದು ಕೊಡುವಂತೆ ಆದೇಶವನ್ನು ಹೊರಡಿಸಿದೆ. ಮಾತ್ರವಲ್ಲದೆ ಇಂದಿನಿಂದ ಪ್ರತ್ಯೇಕವಾಗಿಯೂ ಯಾವುದೇ ಗಡಿ ಮುಚ್ಚಿರಬಾರದೆಂಬಾ ನಿರ್ದೇಶವನ್ನು ನೀಡಿದರೂ ಕಾಸರಗೋಡು ಜಿಲ್ಲಾಡಳಿತ ಕೇವಲ ಕೆಲವು ಪಂಚಾಯತ್‍ಗಳ ವ್ಯಾಪ್ತಿಯಲ್ಲಿರುವವರಿಗೆ ಮಾತ್ರ ಗಡಿಯಲ್ಲಿ ಪಾಸ್ ಇಲ್ಲದೆ ಅನುಮತಿಯನ್ನು ನೀಡಿದರೂ ಉಳಿದವರನ್ನು ಸತಾಯಿಸುತ್ತಿರುವುದನ್ನು ಪ್ರತಿಭಟಿಸಿ ಬಿಜೆಪಿ ಇಂದು ಮತ್ತೆ ಗಡಿ ಉಲ್ಲಂಘನಾ ಪ್ರತಿಭಟನೆಯನ್ನು ನಡೆಸಿದೆ.ಪ್ರತಿಭಟನಾ ಆಂದೋಲನ ಉದ್ದೇಶಿಸಿ ಮಾತನಾಡಿದ ಶ್ರೀಕಾಂತ್ ಕೇರಳದಲ್ಲಿ ಯುಡಿಎಫ್ ಹಾಗೂ ಎಲ್‍ಡಿಎಫ್ ಜನರನ್ನು ವಂಚಿಸಿ ಹಣವನ್ನು ದೋಚುವುದರಲ್ಲಿ ತಲ್ಲೀನರಾಗಿದ್ದಾರೆ. ಇವತ್ತಿನಿಂದ ಗಡಿಯಲ್ಲಿ ಯಾವುದೇ ನಿಯಂತ್ರಣವನ್ನು ಮಾಡಬಾರದು. ಇದನ್ನು ಜಿಲ್ಲಾಡಳಿತ ಮುಂದುವರಿಸಿದರೆ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸಲಿರುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ನವೀನ್ ರಾಜ್, ಪದ್ಮನಾಭ ಕಡಪ್ಪುರ, ಯಾದವ್ ಬಡಾಜೆ, ಗೋಪಾಲ ಶೆಟ್ಟಿ ಅರಿಬೈಲು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *