Header Ads
Breaking News

ತಲಪಾಡಿ ಟೋಲ್‌ಗೇಟ್‌ನಲ್ಲಿ ಅಧಿಕಾರಿಗಳ ಇಬ್ಬಗೆ ನೀತಿ:ಟೆಂಪೋ ಚಾಲಕರಿಂದ ಪ್ರತಿಭಟನೆ

ಮಂಜೇಶ್ವರ: ತಲಪಾಡಿ ಟೋಲ್‌ಗೇಟಿನಲ್ಲಿ ಸಂಚರಿಸುವ ಟೆಂಪೋಗಳಿಗೆ ಕೇರಳ ಹಾಗೂ ಕರ್ನಾಟಕದ ಗಡಿ ಭಾಗದ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಹಣ ಪಾವತಿಸದೇ ಎರಡೂ ಕಡೆ ಉಚಿತವಾಗಿ ಸಂಚರಿಸಲು ಅನುವು ಮಾಡಿ ಕೊಡಲಾಗಿತ್ತು. ಆದರೆ ಟೋಲ್‌ಗೇಟ್ ಅಧಿಕಾರಿಗಳು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮಂಜೇಶ್ವರದಲ್ಲಿ ಟೆಂಪೋ ಚಾಲಕರು ಪ್ರತಿಭಟನೆ ನಡೆಸಿದರು.ಟೋಲ್ ಅಧಿಕೃತರು ಇದನ್ನು ಕರ್ನಾಟಕದ ಐದು ಕಿಲೋ ಮಿಟರ್ ವ್ಯಾಪ್ತಿಯಲ್ಲಿರುವವರಿಗೆ ಮಾತ್ರ ಅನುವು ಮಾಡಿ ಕೊಟ್ಟು ಕೇರಳದ ಐದು ಕಿಲೋ ಮೀಟರ್ ವ್ಯಾಪ್ತಿಯ ಟೆಂಪೋ ಚಾಲಕರನ್ನು ಕಡೆಗಣಿಸಿ ಅಧಿಕೃತರ ಇಬ್ಬಗೆ ನೀತಿಯ ವಿರುದ್ದ ಐಕ್ಯ ಟ್ರೇಡ್ ಯೂನಿಯನ್ ಮುಂದಾಳತ್ವದಲ್ಲಿ ಉದ್ಯಾವರ ಮಾಡ ಟೆಂಪೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.ಕಾಸರಗೋಡು ಜಿಲ್ಲಾ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಅವರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರತಿಭಟನೆಯಲ್ಲಿ ಹುಸೈನ್ ತಲಪಾಡಿ, ಹರೀಶ್ಚಂದ್ರ ಮಂಜೇಶ್ವರ, ಮುಸ್ತಫ ಉದ್ಯಾವರ, ದಯಾಕರ ಮಾಡ, ಮುಸ್ತಫ ಎಂ.ಡಿ ಕಡಂಬಾರ್, ಸೇರಿದಂತೆ ವಿವಿಧ ರಾಜಕೀಯಪಕ್ಷದ ಮುಖಂಡರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *