Header Ads
Header Ads
Breaking News

ತಲಪಾಡಿ ಟೋಲ್‌ಗೇಟ್‌ನಲ್ಲಿ ಮತ್ತೆ ಬಾಲಬಿಚ್ಚಿದ ಸಿಬ್ಬಂದಿ : ಊರವರ ದೂರಿನ ಮೇರೆಗೆ ವಿವಿಧ ರಾಜಕೀಯ ಮುಖಂಡರಿಂದ ಎಚ್ಚರಿಕೆ

ಮಂಜೇಶ್ವರ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಊರಿಗೆ ಶಾಪವಾಗಿರುವ ತಲಪಾಡಿ ಟೋಲ್ ಗೇಟ್ ನಲ್ಲಿ ಸಿಬ್ಬಂದಿಗಳು ಮತ್ತೆ ಬಾಲಬಿಚ್ಚುತಿದ್ದಾರೆಂಬ ಊರವರ ದೂರಿನಂತೆ ತಲಪಾಡಿ ಟೋಲ್ ಗೇಟ್ ಗೆ ದೌಡಾಯಿಸಿದ ವಿವಿಧ ರಾಜಕೀಯ ಹಾಗೂ ಸಂಘಟನೆಗಳ ಕ್ಲಬ್‌ಗಳ ನೇತಾರರ ತಂಡ ಸಂಬಂಧಪಟ್ಟವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಹಾಗೂ ಕೇರಳದ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಸ್ಥಳೀಯರು ವಾಹನದ ಆರ್ ಸಿ ಯನ್ನು ಹೊರತುಪಡಿಸಿ ಆಧಾರ್ ಕಾರ್ಡ್ ಅಥವಾ ಲೈಸನ್ಸ್ ತೋರಿಸಿ ಖಚಿತಪಡಿಸಿದ ಬಳಿಕ ಯಾವುದೇ ಶುಲ್ಕವಿಲ್ಲದೆ ಟೋಲ್ ಗೇಟಿನಿಂದ ಸಾಗಬಹುದಾಗಿ ಸಂಸದರು, ಸಚಿವರು ಸೇರಿದಂತೆ ಇತರ ಜನಪ್ರತಿನಿಧಿಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲ ಸಮಯಗಳ ಹಿಂದೆ ತೀರ್ಮಾನವಾಗಿ ಅದರಂತೆ ಸ್ಥಳೀಯರ ಸಂಚಾರ ಯಾವುದೇ ಸಮಸ್ಯೆಗಳಿಲ್ಲದೆ ಮುಂದುವರಿಯುತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಯ ಸಿಬ್ಬಂದಿಗಳು ಈ ತೀರ್ಮಾನಗಳನ್ನೆಲ್ಲ ಗಾಳಿಗೆ ತೂರಿಕೊಂಡು ವಾಹನದ ಅಸಲಿ ಆರ್ ಸಿ ತೋರಿಸಿದರೆ ಮಾತ್ರ ಉಚಿತ ಸೌಲಭ್ಯವೆಂದು ಹೇಳಿ ಸ್ವತಃ ಕಾನೂನನ್ನು ರೂಪೀಕರಿಸಿ ಗೂಂಡಾ ಶೈಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸುತಿದ್ದಾರೆಂಬ ದೂರುಗಳು ಕೇಳಿ ಬಂದಿತ್ತು. ಇದರಿಂದ ಕೂಡಲೇ ಎಚ್ಚೆತ್ತುಗೊಂಡ ನೇತಾರರು ರೋಗ ಉಲ್ಬಣಿಸುವ ಮೊದಲೇ ಕಷಾಯವನ್ನು ಕುಡಿಸಿದ್ದಾರೆ.

ರಾತ್ರಿ ವೇಳೆಗಳಲ್ಲಿ ಇದೇ ಟೋಲ್ ಗೇಟಿನಲ್ಲಿ ಕ್ರಿಮಿನಲ್ ಹಿನ್ನೆಯುಳ್ಳ ಕೆಲವೊಂದು ಸಿಬ್ಬಂದಿಗಳು ಕುಟುಂಬಗಳು ಸಂಚರಿಸುತ್ತಿರುವ ವಾಹನಗಳನ್ನು ತಡೆದು ಕಿರುಕುಳ ನೀಡುತಿದ್ದಾರೆಂಬ ಮಾಹಿತಿಯನ್ನು ಕೂಡಾ ಕೆಲವೊಂದು ಮಂದಿ ಪತ್ರಿಕಾ ಕಚೇರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಇಂತಹ ಸಿಬ್ಬಂದಿಗಳನ್ನು ವಜಾಗೊಳಿಸಿರುವುದಾಗಿ ಹೇಳುತ್ತಿರುವ ಪೊಲೀಸ್ ಇಲಾಖೆ ವರ್ತಮಾನ ಕಾಲದ ಇಲ್ಲಿಯ ಆಗು ಹೋಗುಗಳ ಬಗ್ಗೆ ನಿರ್ಧಿಷ್ಟವಾದ ಮಾಹಿತಿಯನ್ನು ಪಡೆಯುವಂತೆಯೂ ಪ್ರಯಾಣಿಕರು ಅಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯರು ಟೋಲ್ ಗೇಟ್ ಸಿಬ್ಬಂದಿಗಳಿಗೆ ಅಧಾರ ಕಾರ್ಡ್ ಅಥವಾ ಲೈಸನ್ಸ್ ತೋರಿಸಿದರೆ ಸಾಕೆಂಬುದಾಗಿ ನೇತಾರರು ತಿಳಿಸಿದ್ದಾರೆ. ಮಾತ್ರವಲ್ಲದೆ ಇದನ್ನು ಮೀರಿ ಸಿಬ್ಬಂಧಿಗಳು ಅಸಭ್ಯವಾಗಿ ವರ್ತಿಸಿದರೆ ಉಳ್ಳಾಲ ಠಾಣೆಗೆ ಅಥವಾ ನೇತಾರರ ೯೦೦೮೧೧೩೦೮೪ ಅಥವಾ ೯೪೪೭೨೮೭೦೯೮ ನಂಬ್ರಕ್ಕೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.

ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದೀಖ್ ತಲಪಾಡಿ, ಮುಸ್ಲಿಂ ಲೀಗ್ ನೇತರರಾದ ಮುಕ್ತಾರ್, ಸೈಫುಲ್ಲ್ ತಂಘಲ್, ಮುಸ್ತಫ ಉದ್ಯಾವರ, ಸಿದ್ದೀಖ್ ಮಂಜೇಶ್ವರ, ನಾಸರ್ ಇಡಿಯ, ಡಿ ವೈ ಎಫ್ ಐ ಕುಂಜತ್ತೂರು ವಿಲೇಜ್ ಯೂನಿಟ್ ಅಧ್ಯಕ್ಷ ಮುನೀರ್ ತೂಮಿನಾಡು. ಕಾಂಗ್ರೆಸ್ ನೇತಾರರಾದ ಉಮ್ಮರ್ ಬೋರ್ಕಳ, ಇರ್ಷಾದ್ ಮಂಜೇಶ್ವರ, ಝಕರಿಯ್ಯ, ಅರಬ್ ರೈಡರ್ಸ್ ಕ್ಲಬ್ ಅಧ್ಯಕ್ಷ ಯಯ್ಯಾ ಗೋಲ್ಡ್ ಖಜಾನ, ಅಶ್ರಫ್ ಕುಂಜತ್ತೂರು. ಹುಸೈನ್ ತಲಪಾಡಿ, ಶಬೀರ್ ಅಬ್ಬಾಸ್ ತಲಪಾಡಿ, ಶಂಶುದ್ದೀನ್ ಉಚ್ಚಿಲ ಸೇರಿದಂತೆ ಹಲವು ನೇತಾರರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *