Header Ads
Header Ads
Breaking News

ತಲಪಾಡಿ ಟೋಲ್‍ಗೇಟ್‍ನಲ್ಲಿ ಫಾಸ್ಟ್‍ಟ್ಯಾಗ್‍ಗೆ ಸರ್ವ ಸಿದ್ಧತೆ

ರಾಷ್ಟ್ರೀಯ ಹೆದ್ದಾರಿ66ರ ಕರ್ನಾಟಕ – ಕೇರಳ ಗಡಿಪ್ರದೇಶವಾದ ತಲಪಾಡಿ ಟೋಲ್‍ಗೇಟ್‍ನಲ್ಲಿ ಫಾಸ್ಟ್‍ಟ್ಯಾಗ್‍ಗೆ ಸರ್ವ ಸಿದ್ಧತೆ ನಡೆದಿದ್ದು, ಟೋಲ್ ಪ್ಲಾಝಾದಲ್ಲಿ ಫಾಸ್ಟ್ ಟ್ಯಾಗ್ ವಿತರಿಸುವ ಕಾರ್ಯವನ್ನು ಪೇಟಿಎಂ , ಆ್ಯಕ್ಸಿಸ್ ಬ್ಯಾಂಕ್ ಮತ್ತು ಎನ್‍ಎಚ್‍ಎಐನಿಂದ ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ವಿತರಣೆ ಮತ್ತು ರಿಚಾರ್ಜ್ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ.

ಟೋಲ್ ಫ್ಲಾಝಾದ ಎರಡು ಬದಿಯಲ್ಲಿ ಒಟ್ಟು 10 ಟೋಲ್‍ಗೇಟ್‍ಗಳಿದ್ದು ಎಲ್ಲಾ ಟೋಲ್‍ಗೇಟ್‍ಗಳಲ್ಲಿ ಫ್ಟಾಟ್ಯಾಗ್ ಸ್ಕ್ಯಾನರ್ ಅಳವಡಿಲಾಗಿದ್ದು ಪ್ರಾಯೋಗಿಕವಾಗಿ ಎಲ್ಲಾ ಟೋಲ್‍ನಲ್ಲಿ ಫಾಸ್ಟ್ ಟ್ಯಾಗ್ ವಾಹನಗಳು ನಿರಾತಂಕವಾಗಿ ಸಂಚರಿಸಲು ಆರಂಬಿಸಿಸಿದ್ದು, ಸ್ಕ್ಯಾನ್ ಆಗದ ವಾಹನಗಳಿಗೆ ಹ್ಯಾಂಡ್ ಸ್ಕ್ಯಾನರ್ ಮೂಲಕ ಫಾಸ್ಟ್ ಟ್ಯಾಗ್ ಸ್ಕ್ಯಾನಿಂಗ್ ನಡೆಸಿದರೆ, ಕೆಲವು ವಾಹನಗಳಲ್ಲಿ ಫಾಸ್ಟ್ ಟ್ಯಾಗ್‍ನಲ್ಲಿ ಹಣವಿಲ್ಲದಿದ್ದರೆ ನಗದು ಹಣ ಸ್ವೀಕರಿಸಲು ಸಿಬಂದಿಗಳು ಕೌಂಟರ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಡಿ. 1ರ ಬಳಿಕ ತಲಪಾಡಿ ಟೋಲ್ ಫ್ಲಾಝಾದ 10 ಗೇಟ್‍ಗಳಲ್ಲಿ ಎಂಟು ಗೇಟ್‍ಗಳು ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ಅಳವಡಿಸಿರುವ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶವಿದ್ದರೆ, ಎರಡು ಟೋಲ್‍ಗೇಟ್‍ಗಳು ಮಾತ್ರ ನಗದು ಸ್ವೀಕಾರಕ್ಕೆ ಅವಕಾಶವಿದೆ. ಈ ಸಂದರ್ಭದಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸದ ವಾಹನಗಳ ಸರತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನ ಮಾಲಕರು ಟ್ಯಾಗ್ ಅಳವಡಿಸಿದರೆ ಸಮಯವನ್ನು ಉಳಿಸಬಹುದು ಎನ್ನುತ್ತಾರೆ ಟೋಲ್‍ಗೇಟ್‍ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಭಾಸ್ಕರ್ ಶೆಟ್ಟಿ ತಲಪಾಡಿ ನಾರ್ಲ ಅವರು.

ತಲಪಾಡಿ ಟೋಲ್‍ನ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರು ಮಾಲಕರಿಗೆ ಮಾಸಿಕ 265 ರೂ. ಮಾಸಿಕ ಪಾಸ್ ವ್ಯವಸ್ಥೆ ಮಾಡಿದ್ದು, ಈ ವ್ಯಾಪ್ತಿಯಲ್ಲಿ ಬರುವ ಕಾರಿನ ಮಾಲಕರು ಆದಾರ್ ಕಾರ್ಡ್, ಕಾರಿನ ದಾಖಲೆಗಳು, ಡ್ರೈವಿಂಗ್ ಲೈಸೆನ್ಸ್ ನೀಡಿದರೆ ತಲಪಾಡಿ ಟೋಲ್ ಫ್ಲಾಝಾದ ಕಚೇರಿಯಲ್ಲಿ ಮಾಸಿಕ ಪಾಸ್ ಪಡೆದುಕೊಳ್ಳಬಹುದು ಎಂದು ಟೋಲ್ ಫ್ಲಾಝಾದ ಪ್ರಬಂಧಕ ಶಿವಪ್ರಸಾದ್ ರೈ ತಿಳಿಸಿದರು. ಈಗಾಗಲೇ ಸುಮಾರು 800ಕ್ಕೂ ಹೆಚ್ಚು ಪಾಸ್ ವಿತರಣೆಯಾಗಿದೆ.

ಕಳೆದ ನಾಲ್ಕು ದಿನಗಳಿಂದ ತಲಪಾಡಿ ಟೋಲ್ ಫ್ಲಾಝಾದಲ್ಲಿ ಫಾಸ್ಟ್ ಟ್ಯಾಗ್ ವಿತರಣೆ ನಡೆಯುತ್ತಿದ್ದು, ಪೇಟಿಎಂನಿಂದ ಬುಧವಾರ ಸಂಜೆಯ ವೇಳೆಗೆ ಫಾಸ್ಟ್ ಟ್ಯಾಗ್ ನೋಂದಾವಣೆ 400ರ ಗಡಿ ದಾಟಿದರೆ, ಆ್ಯಕ್ಸಿಸ್ ಬ್ಯಾಂಕ್‍ನಿಂದ 50, ಎನ್‍ಎಚ್‍ಎಐನಿಂದ 80 ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ವಿತರಣೆಯಾಗಿದ್ದು ಒಟ್ಟಾರೆಯಾಗಿ 500ಕ್ಕೂ ಹೆಚ್ಚು ಸ್ಟಿಕ್ಕರ್ ವಿತರಣೆಯಾಗಿದೆ. ಎನ್‍ಎಚ್‍ಎಐ ಒಂದು ದಿನ ಮಾತ್ರ ಸ್ಟಿಕ್ಕರ್ ನೀಡುವ ಕಾರ್ಯ ನಡೆಸಿದ್ದು, ಗುರುವಾರದಿಂದ ಸ್ಟಿಕ್ಕರ್ ನೀಡುವ ಕಾರ್ಯ ಆರಂಭವಾಗುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟೋಲ್‍ಫ್ಲಾಝಾ ನಿರ್ಮಾಣವಾಗಿರುವುದರಿಂದ ಕೆÀಳಗಿನ ತಲಪಾಡಿಯಿಂದ ಮೇಲಿನ ತಲಪಾಡಿ ಕಡೆ ಅಂಗಡಿ, ವ್ಯಾಪಾರಕ್ಕೆ ತೆರಳುವ ವಾಹನಗಳ ಮಾಲಿಕರಿಗೆ ಟೋಲ್ ಪ್ರೀ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಮಂಜೇಶ್ವರ ವ್ಯಾಪ್ತಿಯವರಿಗೆ ಟೋಲ್‍ಫ್ರೀ ನೀಡದಿದ್ದರೆ ಡಿ. 1ರಂದು ಪ್ರತಿಭಟನೆ ನಡೆಸುವ ಸೂಚನೆಯನ್ನು ಜನಪ್ರತಿನಿಧಿಗಳು ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಸಾಂಕೇತಿಕ ಪ್ರತಿಭಟನೆ ನಡೆದಿದೆ.

Related posts

Leave a Reply

Your email address will not be published. Required fields are marked *