Breaking News

ತಲಪಾಡಿ ಟೋಲ್ ಗೇಟಿನಲ್ಲಿ ಮತ್ತೆ ಗೂಂಡಾಗಳ ಅಟ್ಟ ಹಾಸ, ಅಮಾಯಕ ಯುವಕನಿಗೆ ಗೂಂಡಾ ಸಿಬ್ಬಂದಿಗಳಿಂದ ಮಾರಕ ಹಲ್ಲೆ


ತಲಪಾಡಿ ಟೋಲ್ ಗೇಟಿನಲ್ಲಿ ಗೂಂಡಾಗಳ ಅಟ್ಟಹಾಸ ಮತ್ತೆ ಮರುಕಳಿಸಿದೆ. ಸಮ ವಸ್ತ್ರ ಧರಿಸಿದ ಗೂಂಡಾಗಳ ಗುಂಪು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ಷುಲ್ಲಕ ಕಾರಣಕ್ಕೆ ಹಲ್ಲೆಗೈದು ಇಲ್ಲಿ ಗಲಾಟೆ ಎಬ್ಬಿಸುತ್ತಿದೆ.
ಈ ಕೃತ್ಯವನ್ನ ಕಂಡೂ ಕಾಣದಂತೆ ವರ್ತಿಸುತ್ತಿರುವ ಪೊಲೀಸರ ಪಕ್ಷಪಾತ ಧೋರಣೆ ಇಲ್ಲಿರುವ ಗೂಂಡಾಗಳಿಗೊಂದು ವರದಾನವಾಗಿರುವುದಾಗಿ ಆರೋಪ ಕೇಳಿ ಬರುತ್ತಿದೆ. ನಿನ್ನೆ ರಾತ್ರಿ ತೂಮಿನಾಡು ನಿವಾಸಿ ವೃತ್ತಿಯಲ್ಲಿ ಚಾಲಕನಾಗಿರುವ ಅನ್ಸಾರ್ ಎಂಬಾತನಿಗೆ ಗೂಂಡಾ ತಂಡವೊಂದು ಮಾರಕಾಯುಧಗಳಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಸ್ಥಳೀಯ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವವರಿಗೆ ಯಾವುದೇ ಶುಲ್ಕವಿಲ್ಲದೆ ಇಲ್ಲಿಂದ ಸಾಗಬಹುದಾಗಿದೆ. ಇದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರುಗಳ ಸಮ್ಮುಖದಲ್ಲಿ ತೆಗೆದ ತೀರ್ಮಾನವಾಗಿದೆ. ಇದರಂತೆ ಒಂದು ಕಿಲೋ ಮೀಟರ್ ಅಂತರದಲ್ಲಿ ವಾಸವಾಗಿರುವ ಅನ್ಸಾರ್ ಎಂಬ ಯುವಕ ನಾನು ಸ್ಥಳೀಯನೆಂದು ಹೇಳುತ್ತಿರುವಂತೆ ಗೂಂಡಾ ಪಡೆ ಹೆಸರು ಕೇಳಿ ಮಾರಕಾಯುಧಗಳಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ.
ಮಾಹಿತಿ ಅರಿತು ಸ್ಥಳದಲ್ಲಿ ರಾತ್ರಿ ವೇಳೆ ಭಾರೀ ಜನ ಜಮಾಯಿಸಿದ್ದು, ಕೆಲ ಸಮಯ ಇಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಉಳ್ಳಾಲ ಹಾಗೂ ಕೊಣಾಜೆ ಪೊಲೀಸರು ಆಗಮಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈ ಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಜನರು ಅಲ್ಲಿಂದ ಚದುರಿದ್ದಾರೆ. ಟೋಲ್ ಗೇಟ್ ಆರಂಭವಾಗುವ ಸಂದರ್ಭ ಹಲವು ಬೇಡಿಕೆಗಳನ್ನು ಇಟ್ಟು ಪ್ರತಿಭಟನೆಗಳು ತಾರಕಕೇರಿತ್ತು. ಈ ಸಂದರ್ಭ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ನಾಗರಿಕರು ಪ್ರತಿಭಟನೆ ಬಿಟ್ಟಿದ್ದರು. ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಇಲ್ಲಿ ಸಿಬ್ಬಂದಿಯಾಗಿ ನಿಲ್ಲಿಸಬಾರದು ಹಾಗೂ ಸಮವಸ್ತ್ರ ಧರಿಸದ ವ್ಯಕ್ತಿಗಳನ್ನು ಟೋಲ್ ಗೇಟಿನಲ್ಲಿ ನಿಲ್ಲಿಸಬಾರದೆಂಬುದಾಗಿ ಅಧಿಕಾರಿಗಳು ತಾಕೀತು ನೀಡಿದ್ದರು. ಆದರೆ ಇದೀಗ ಅಧಿಕಾರಿಗಳ ತಾಕೀತಿಗೆ ಕಿಂಚತ್ತೂ ಬೆಲೆ ನೀಡದೆ ಇಲ್ಲಿ ಗೂಂಡಾ ತಾಂಡವ ನೃತ್ಯ ನಡೆಯುತಿದ್ದರೂ ಪೊಲೀಸರು ಮೌನವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

Related posts

Leave a Reply