Header Ads
Breaking News

ತಲಪಾಡಿ ಟೋಲ್ ಗೇಟ್‍ನಲ್ಲಿ ಸ್ಥಳೀಯರಿಗೆ ಮತ್ತೆ ಸಮಸ್ಯೆ : ತೀವ್ರ ಪ್ರತಿಭಟನೆಗೆ ಸರ್ವಪಕ್ಷಗಳ ನಿರ್ಧಾರ

ಮಂಜೇಶ್ವರ: ತಲಪಾಡಿ ಟೋಲ್ ಗೇಟ್‍ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿಯನ್ನು ಮತ್ತೆ ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ತೀವ್ರ ಹೋರಾಟ ನಡೆಸಲು ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಕಳೆದ ಕೆಲವು ದಿನಗಳಿಂದ ಟೋಲ್ ವಿನಾಯಿತಿ ಯನ್ನು ರದ್ದುಪಡಿಸಲಾಗಿದ್ದು ಹಾಗೂ ಖಾಸಗೀ ಬಸ್ಸುಗಳು ಪ್ರಯಾಣಿಕರನ್ನು ಟೋಲ್ ಬಳಿ ಇಳಿಸುತ್ತಿದ್ದು ಇದರಿಂದಾಗಿ ಪ್ರಯಾಣಿಕರು ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಹೊಸಂಗಡಿ ಗೇಟ್ ವೇ ಆಡಿಟೊರಿಯಂನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.ಸಮಸ್ಯೆಯನ್ನು ಶೀಘ್ರವೇ ಫರಿಹರಿಸಧಿಧ್ಧಲ್ಲಿ ಫೆ.25ರಂದು ತಲಪಾಡಿ ಟೋಲ್ ಗೇಟಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಯಿತು. ಈ ಸಂದರ್ಭ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾ. ಪಂ. ಸದಸ್ಯ ಮುಸ್ತಫಾ ಉದ್ಯಾವರ, ಗ್ರಾ.ಪಂ.ಸದಸ್ಯ ಮುಕ್ತಾರ್.ಎ, ವಿವಿಧ ರಾಜಕೀಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *