Header Ads
Breaking News

ತಲಪಾಡಿ ಟೋಲ್ ಸಮಸ್ಯೆಯನ್ನು ಶೀಘ್ರ ಪರಿಹರಿಸಿ; ತಲಪಾಡಿ ಟೋಲ್‍ಗೇಟ್ ಬಳಿ ಪ್ರತಿಭಟನೆ

ತಲಪಾಡಿ ಟೋಲ್ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಲಪಾಡಿ ಟೋಲ್ ಗೇಟ್ ಬಳಿ ಪ್ರತಿಭಟನೆಯನ್ನು ನಡೆಸಿದರು.

ಸ್ಥಳೀಯರಿಗೆ ಇದ್ದ ಟೋಲ್ ವಿನಾಯಿತಿ ಯನ್ನು ರದ್ದುಪಡಿಸಿರುವ ಕ್ರಮವನ್ನು ಖಂಡಿಸಿ ಹಾಗೂ ಮಂಗಳೂರು – ತಲಪಾಡಿ ನಡುವೆ ಓಡಾಡುವ ಸಿಟಿ ಬಸ್ಸುಗಳನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ, ಪ್ರಯಾಣಿಕರನ್ನು ಅರ್ಧದಾರಿಯಲ್ಲಿ ಇಳಿಸುವ ವರ್ತನೆಯ ವಿರುದ್ಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಟೋಲ್ ಗೇಟ್ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಬಳಿಕ ತಲಪಾಡಿ ಟೋಲ್ ಅಧಿಕೃತರ ಜೊತೆ ಸಮಾಲೋಚನೆ ನಡೆಸಿ ತಕ್ಷಣವೇ ಸ್ಥಳೀಯರಿಗೆ ವಿನಾಯ್ತಿಯನ್ನು ನೀಡಬೇಕು ಹಾಗೂ ತಲಪಾಡಿ ಮಂಗಳೂರು ಬಸ್ಸಿಗೆ ಪ್ರವೇಶ ನೀಡಬೇಕೆಂದು ಒತ್ತಾಯಿಸಿದರು. ಬೇಡಿಕೆ ತಕ್ಷಣವೇ ಈಡೇರಿಸದಿದ್ದಲ್ಲಿ ಫೆ.25ರಂದು ತಲಪಾಡಿ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಯಿತು.

ಮಂಜೇಶ್ವರದ ಎಲ್ಲಾ ರಾಜಕೀಯ ಪಕ್ಷಗಳ, ಸಂಘಟನೆಗಳ ನೇತಾರರಾದ ಜಿಲ್ಲಾ ಪಂಚಾಯತ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾ.ಪಂ.ಅಧ್ಯಕ್ಷ ಎಕೆಎಂ ಅಶ್ರಫ್, ಸಧಸ್ಯ ಮಸ್ತಫಾ ಉದ್ಯಾವರ, ಪಂ.ಸದಸ್ಯ ಅಬ್ದುಲ್ಲ ಗುಡ್ಡಕೇರಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಾದ ಹರಿಶ್ಚಂದ್ರ ಮಂಜೇಶ್ವರ ಮುಂತಾದವರು ನೇತೃತ್ವ ನೀಡಿದರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *