Header Ads
Breaking News

ತಲಪಾಡಿ ಬಸ್ ನಿಲ್ದಾಣಕ್ಕೆ ತೆರಳದೆ ಸಂಚರಿಸುವ ರೂಟ್ ಬಸ್‌ಗಳು; ರಾ.ಹೆ ಪ್ರಾಧಿಕಾರ ಮತ್ತು ಸಿಟಿ ಬಸ್ ಮಾಲೀಕರ ವಿರುದ್ಧ ಪ್ರತಿಭಟನೆ

ತಲಪಾಡಿ ರೂಟ್ ಬಸ್ಸುಗಳು ತಲಪಾಡಿ ಬಸ್ ನಿಲ್ದಾಣಕ್ಕೆ ತೆರಳದೆ ಒಂದು ಕಿ.ಮೀ ಉದ್ದಕ್ಕೆ ಪ್ರಯಾಣಿಕರು ನಡೆದುಕೊಂಡು ಸಾಗುತ್ತಾ ತೊಂದರೆಗೀಡಾಗುತ್ತಿರುವುದರ ವಿರುದ್ಧ ತಲಪಾಡಿ ನಾಗರಿಕರು ಮತ್ತು ಕೇರಳದಿಂದ ಬರುವ ಪ್ರಯಾಣಿಕರು ಟೋಲ್‌ಗೇಟ್, ರಾ.ಹೆ ಪ್ರಾಧಿಕಾರ ಮತ್ತು ಸಿಟಿ ಬಸ್ ಮಾಲೀಕರ ವಿರುದ್ದ ಟೋಲ್ ಎದುರು ನಿಂತು ಪ್ರತಿಭಟನೆ ನಡೆಸಿ, ಮಾನವ ಸರಪಳಿಯನ್ನು ರಚಿಸಿ, ಒಂದು ದಿನ ಟೋಲ್ ರಹಿತ ಬಸ್ ತೆರಳುವಂತೆ ಮಾಡಿದ್ದಾರೆ.

 

ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್ ಮಾತನಾಡಿ, ಟೋಲ್ ನಿರ್ಮಿಸುವ ಸಂದರ್ಭ ಗ್ರಾಮದ ಜನರಲ್ಲಿದ್ದ 8 ಎಕರೆ ಪ್ರದೇಶವನ್ನು ಸೆಂಟ್ಸ್ ಗೆ 12,000 ರೂ. ನೀಡಿ ಖರೀದಿಸಿದರು. ಅದರ ಜೊತೆಗೆ ಸರಕಾರಿ ಜಾಗವನ್ನು ಗುಳುಂ ಮಾಡಿದರು. ಇದೀಗ ಗ್ರಾಮದ ಜನರಿಗೆ ಇರುವ ಬಸ್ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಸಾಮಾನ್ಯ ಜನ ಟೋಲ್ ಎದುರು ನಿಂತರೆ ಬೊಬ್ಬಿಡುವ ಸಿಬ್ಬಂದಿ, ಒಂದು ವರ್ಷದಿಂದ ಸಿಟಿ ಬಸ್ ಗಳು ಎದುರಲ್ಲೇ ನಿಂತರೂ ಮಾತನಾಡುತ್ತಿಲ್ಲ. ಟೋಲ್ ಸಿಬ್ಬಂದಿ ಇದರ ಜತೆಗೆ ಕೈಜೋಡಿಸಿದ್ದಾರೆ. ಜಿಲ್ಲಾಡಳಿತ ತಕ್ಷಣ ತಲಪಾಡಿ ಗ್ರಾಮದ ಜನರ ಸಮಸ್ಯೆಗೆ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯೆ ಸುರೇಖಾ ಚಂದ್ರಹಾಸ್,ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ, ತಾ.ಪಂ ಸದಸ್ಯೆ ಸಿದ್ದೀಖ್ ಕೊಳಂಗೆರೆ, ತಲಪಾಡಿ ಪಂ..ಸದಸ್ಯ ಇಸ್ಮಾಯಿಲ್ ಕೆ.ಸಿ ರೋಡ್, ಸಾಮಾಜಿಕ ಕಾರ್ಯಕರ್ತ ಯಶು ಪಕಳ ಮುಂತಾದವರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *