Header Ads
Header Ads
Breaking News

ತಲಪಾಡಿ ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ತಲಪಾಡಿಯ ಶಾರದಾ ಆಯುರ್ಧಾಮದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಳೆದ ೨೦ ದಿನಗಳಿಂದ ಉಚಿತವಾಗಿ ನಡೆಯುತ್ತಿರುವ ದೇಹ/ರೋಗಕ್ಕೆ ಅನುಸಾರವಾದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶಾರದಾ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ. ರವಿಗಣೇಶ್ ಮೊಗ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಸೌಮ್ಯ ಕೋಟ್ಯಾನ್ ಅವರು ಯೋಗ ತರಬೇತಿಯನ್ನು ನೀಡಿದ್ದು, ಭಾಗವಹಿಸಿದ 35ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಆಶಾ ಶೆಟ್ಟಿ, ಜಸರೀನ್, ರೆಹನಾಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳು ತುಂಬಾ ಉತ್ಸುಕತೆಯಿಂದ ಭಾಗವಹಿಸಿದ್ದ ಈ ಶಿಬಿರದಲ್ಲಿ, ಅವರ ವತಿಯಿಂದ ಯೋಗ ಶಿಕ್ಷಕರಿಗೆ ಕೃತಜ್ಞತಾ ಪೂರ್ವಕವಾಗಿ ಗೌರವ ಸಮರ್ಪಣೆ ನಡೆಸಲಾಯಿತು. ಅವರ ಬೇಡಿಕೆಯಂತೆ, ಮುಂದಿನ ದಿನಗಳಲ್ಲಿ ಇದೇ ಸಮಯಕ್ಕೆ, ಆಸ್ಪತ್ರೆಯಲ್ಲಿ ನಿರಂತರವಾಗಿ ಯೋಗ ಶಿಬಿರ ನಡೆಸುವಂತೆ ನಿರ್ಣಯಿಸಲಾಯಿತು. ಯೋಜನಾಧಿಕಾರಿ ಶ್ರೀ ವಿಕ್ರಮ್ ಕುಂಟಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *