Header Ads
Breaking News

ತಳಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುವ ಯೋಜನೆ : ಮುಲ್ಕಿಯಲ್ಲಿ ಪ್ರದೇಶ ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ಹೇಳಿಕೆ

ಮೂಲ್ಕಿ : ತಳಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ರಾಜ್ಯವ್ಯಾಪಿಯಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು ಮಾತ್ರವಲ್ಲದೆ ಮುಂದೆ ಬರಲಿರುವ ಪಂಚಾಯತ್, ತಾಲೂಕು, ಜಿಲ್ಲೆ ಮತ್ತು 2023-24ರಲ್ಲಿ ಬರಲಿರುವ ವಿಧಾನ ಸಭಾ ಚುಣಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಗಳಿಸಲು ಕಾರ್ಯಸೂಚಿ ಕೈಗೊಳ್ಳಲಿದ್ದೇವೆ ಎಂದು ಮಾಜಿ ಸಚಿವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿದರು. ಅವರು ಧಿಢೀರ್ ಆಗಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಮಾತ್ರ ಸಾಮಾಜಿಕ ನ್ಯಾಯ ಲಭ್ಯವಾಗುತ್ತದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2ಕೋಟಿ ಉದ್ಯೋಗದ ಭರವಸೆಯನ್ನು ಈಡೇರಿಸಲಾಗದೆ ಸೋತಿದೆ. ಅಧಿಕಾರ ಮತ್ತು ಹಣದ ಬಲದಲ್ಲಿ ಉಪಚುಣಾವಣೆಯನ್ನು ಗೆದ್ದಿದೆ. ರಾಜ್ಯದಲ್ಲಿ ಕಾಂಗ್ರಸ್ ಪಕ್ಷದ ಆಡಳಿತದ ಸಮಯದಲ್ಲಿ ನಡೆದ ಅಭಿವೃದ್ದಿಯನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿರುವ ಕಾರಣ ಸೋಲು ಉಂಟಾಗಿದೆ ಈಗಾಗಲೇ ರಾಜ್ಯದಾದಂತ ಪ್ರವಾಸಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಚುಣಾವಣೆಗಳನ್ನು ಸಂಘಟಿತರಾಗಿ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ನಳಿನ್‍ಕುಮಾರ್ ಕಟೀಲು ಅವರಿಗೆ ಮಾತೇ ಬಂಡವಾಳವಾಗಿದೆ ಎಲ್ಲವನ್ನು ಬಾಯಿ ಮಾತಿನಲ್ಲಿಯೇ ಹೇಳಿ ಕಾಲ ಹರಣ ಮಾಡುತ್ತಿದ್ದಾರೆ, ಕಳೆದ ಬಾರಿ ಸರಕಾರದ ಯಶಸ್ವಿ ಯೋಜನೆಗಳನ್ನು ಜನರಲ್ಲಿ ತಲುಪಿಸಲು ವಿಫಲರಾಗಿದ್ದೇವೆ ಉತ್ತಮ ಆಯ್ಕೆಯನ್ನೇ ಮಾಡಿದ್ದರೂ ಮೂಲ್ಕಿ ಮೂಡಬಿದ್ರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು.. ಮುಂದಿನ ಬಾರಿ ನಾವು ಗೆಲ್ಲುವ ಅಭ್ಯರ್ಥಿಯ ಆಯ್ಕೆ ಮಾಡಿ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ ಎಂದರು.

ಈ ಸಂದರ್ಭ ಕೆಪಿಸಿಸಿ ಕೋರ್ಡಿನೇಟರ್ ಎಚ್. ವಸಂತ ಬೆರ್ನಾಡ್, ಜಿಲ್ಲಾ ಮಾಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಜಿಲ್ಲಾ ಯುವ ಇಂಟಕ್ ಅಧ್ಯಕ್ಷ ಚಿರಂಜೀವಿ ಅಂಚನ್, ಮೂಲ್ಕಿ ಬ್ಲಾಕ್ ಇಂಟಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *