Header Ads
Header Ads
Breaking News

ತಳ್ಳುಗಾಡಿ ವ್ಯಾಪಾರಿಗಳಿಂದ ವೃದ್ಧನಿಗೆ ಅಪಹಾಸ್ಯ ಅಂಗವಿಕಲರಿಗೆ ಮತ್ತು ಯುವತಿಯರಿಗೆ ತೊಂದರೆ ತಳ್ಳುಗಾಡಿ ವ್ಯಾಪಾರಿಗಳ ದುರ್ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ಉಡುಪಿಯಲ್ಲಿ ನಡೆದ ಘಟನೆ

ತಳ್ಳುಗಾಡಿ ವ್ಯಾಪಾರಿಗಳು ವಿಕಲಚೇತನ ವೃದ್ಧನಿಗೆ ಅಪಹಾಸ್ಯ ಮಾಡಿರುವ ಘಟನೆ ಉಡುಪಿ ನಗರದಲ್ಲಿ ನಡೆದಿದೆ. ಜನರು ಓಡಾಡೋ ಸ್ಥಳದಲ್ಲಿ ತಳ್ಳಗಾಡಿಗಳನ್ನಿಟ್ಟು ವ್ಯಾಪಾರ ಮಾಡೋ ಜೊತೆಗೆ ಅಂಗವಿಕಲರನ್ನು ತಮಾಷೆ ಮಾಡುವುದು, ಜೊತೆಗೆ ಬಸ್ಸು ನಿಲ್ದಾಣಗಳಲ್ಲಿ ಓಡಾಡೋ ಯುವತಿಯರನ್ನು ಚುಡಾಯಿಸೋದು ಸಾಮಾನ್ಯವಾಗಿದೆ.

ಹೀಗಾಗಿ ತಳ್ಳುಗಾಡಿ ವ್ಯಾಪಾರಿಗಳ ದುರ್ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ತಳ್ಳುಗಾಡಿ ವ್ಯಾಪಾರಸ್ಥರಿಂದ ಅವಮಾನಕ್ಕೊಳಗಾದ ವೃದ್ಧ ಸಾರ್ವಜನಿಕ ಸ್ಥಳದಲ್ಲೇ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ತಳ್ಳುಗಾಡಿ ವ್ಯಾಪಾರಸ್ಥರಿಗೆ ನಗರದೊಳಗೆ ಅವಕಾಶ ನೀಡಬಾರದು ಎಂದು ಒತ್ತಾಯವೂ ಕೇಳಿ ಬಂದಿದೆ.