Header Ads
Header Ads
Breaking News

ತವರಿಗೆ ಮರಳಿದ ಉಡುಪಿ ಶ್ರೀಕೃಷ್ಣಮಠದ ಆನೆ ಅನಾರೋಗ್ಯದಿಂದ ಬಳಲುತ್ತಿದ್ದ ಸುಭದ್ರೆ ಅರಣ್ಯ ಅಧಿಕಾರಿಗಳ ಸಹಾಯದಿಂದ ಶಿವಮೊಗ್ಗಕ್ಕೆ

ಮೂರು ವರ್ಷಗಳ ಹಿಂದೆ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಬಂದಿದ್ದ ಆನೆ ಸುಭದ್ರೆ ತನ್ನ ತವರಾದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಶಾಶ್ವತವಾಗಿ ನೆಲೆಸಲು ಹಿಂದಿರುಗಿದ್ದಾಳೆ.

ಬುಧವಾರ ಸಂಜೆ ವಲಯ ಅರಣ್ಯ ಅಧಿಕಾರಿ ಕ್ಲಿಪರ್ಡ್ ಲೋಬೋ, ಶಿವಮೊಗ್ಗ ವನ್ಯಜೀವಿ ವಿಭಾಗದ ಹಿರಿಯ ಪಶು ವೈದ್ಯ ಡಾ. ವಿನಯ ಎಸ್. ಶ್ರೀ ಕೃಷ್ಣಮಠದ ಪ್ರಮುಖರ ಉಪಸ್ಥಿತಿಯಲ್ಲಿ ಅನೆಯನ್ನು ಕೊಂಡೊಯ್ಯಲಾಯಿತು. ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ವಚ್ಚಂದವಾಗಿ ತಿರುಗಾಡಿಕೊಂಡು ಸದಾ ಚಟುವಟಿಕೆಯಿಂದಿರುತ್ತಿದ್ದ ಸುಭದ್ರೆ ಉಡುಪಿಗೆ ಬಂದೊಡನೆ ಮಂಕಾಗುತ್ತಿದ್ದಳು. ಒಂದೆಡೆ ಕಾಲಿಗೆ ಸಂಬಂಧಿಸಿದ ಪೂಟ್‌ರೂಟ್ ಆರೋಗ್ಯ ಸಮಸ್ಯೆಯಿಂದ ಆನೆ ಬಳುಲುತ್ತಿತ್ತು. ಆನೆಯ ಆರೋಗ್ಯದ ಹಿತದೃಷ್ಠಿಯಿಂದ ಶಿವಮೊಗ್ಗದ ಸಕ್ರೆಬೈಲು ಆನೆಯ ಬಿಡಾರಕ್ಕೆ ಕೊಂಡೊಯ್ಯಲಾಗಿದೆ.
ವರದಿ: ಪಲ್ಲವಿ ಸಂತೋಷ ಉಡುಪಿ

Related posts

Leave a Reply