Header Ads
Header Ads
Header Ads
Breaking News

ತಾಂತ್ರಿಕ ಶಿಕ್ಷಣದಲ್ಲಿ ಅಂತರಾಷ್ಟ್ರೀಯ ವಿನಿಮಯ ಸಂತ ಅಲೋಶಿಯಸ್ ಐಟಿ‌ಐನಲ್ಲಿ ಕಾರ್ಯಕ್ರಮ

ಮಂಗಳೂರಿನ ಸಂತ ಅಲೋಶಿಯಸ್ ಇಂಡಸ್ಟ್ರೀಯಲ್ ಟ್ರೈನಿಂಗ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಅಂತರರಾಷ್ಟ್ರೀಯ ವಿನಿಮಯ ಎಂಬ ಕಾರ್ಯಕ್ರಮ ನಡೆಯಿತು. ಮೊದಲಿಗೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದಲ್ಲಿ ಐಟಿ‌ಐಯ ಪ್ರಿನ್ಸಿಪಾಲ್ ವಿನ್ಸೆಂಟ್ ಮೆಂಡೋನ್ಸಾ ಪ್ರಸ್ತಾವಿಕವಾಗಿ ಮಾತನಾಡಿದರು.

ಅನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಡ್ ಸೋಬನಾ ಪುರಸ್ಕೃತರಾದ ಗೋಪಾಲ್ ಗೌಡ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ವಿವಿಧ ಪ್ರತಿಭೆಗಳಿದೆ ಅದನ್ನು ನಮ್ಮ ಸಮಾಜಕ್ಕೆ ತೋರ್ಪಡಿಸುವಂತ ಕೆಲಸ ಆಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಐಟಿ‌ಐ ನಿರ್ದೇಶಕರಾದ ರೆವರೆಂಡ್ ಫಾದರ್ ಎರಿಕ್ ಮಥಾಯಿಸ್, ರೆವರೆಂಡ್ ಫಾದರ್ ಲಿಯೋ ಡಿಸೋಜಾ, ಡಾ. ಪ್ರಾಂಕ್ ಹೊಯರ್, ಮೋನಿಕಾ ಹೊಯರ್, ರಾಬರ್ಟ್ ಹೊಯರ್, ರೋಮಿಯಸ್ ಡಿಸೋಜ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply