Header Ads
Header Ads
Breaking News

ತಾಯಿಯನ್ನು ಕಾಣಲು ಬಂದ ಬನ್ನಂಜೆ ರಾಜ. ಮಾನವೀಯ ನೆಲೆಯಲ್ಲಿ ಭೇಟಿಗೆ ಅವಕಾಶ ನೀಡಿದ್ದ ನ್ಯಾಯಾಲಯ.

ಭೂಗತ ಪಾತಕಿ ಬನ್ನಂಜೆ ರಾಜ ತಾಯಿಯನ್ನು ಕಾಣಲು ಬಂದಿದ್ದಾನೆ. ಸದ್ಯ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿರುವ ಈ ನೊಟೋರಿಯಸ್ ಕ್ರಿಮಿನಲ್‌ಗೆ ಮಾನವೀಯ ನೆಲೆಯಲ್ಲಿ ನ್ಯಾಯಾಲಯ ಈ ವಿಶೇಷ ಅವಕಾಶ ನೀಡಿದೆ. ರಾಜನ ತಾಯಿ ವಿಲಾಸಿನಿ ಶೆಟ್ಟಿಗಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ತಾಯಿಯ ಭೇಟಿಗೆ ರಾಜ ನ್ಯಾಯಾಲಯದಲ್ಲಿ ಅವಕಾಶ ಕೋರಿದ್ದ. ಭಾನುವಾರ ಸಂಜೆ ಆತನನ್ನು ಕರೆತಂದು ಉಡುಪಿ ನಗರ ಠಾಣೆಯಲ್ಲಿ ಇರಿಸಲಾಗಿತ್ತು. ಠಾಣೆಯ ಸೆಲ್ ನಲ್ಲೇ ರಾತ್ರಿ ಕಳೆದ ಬನ್ನಂಜೆ ರಾಜನನ್ನು ಇಂದು ವಿಶೇಷ ಭದ್ರತೆಯಲ್ಲಿ ಕರೆತರಲಾಯ್ತು. ಮಲ್ಪೆ ಸಮೀಪದ ಕಲ್ಮಾಡಿಯ ಮನೆಯ ಸುತ್ತಲೂ ಪೊಲಿಸ್ ಭದ್ರತೆ ಮಾಡಲಾಗಿತ್ತು. ಬನ್ನಂಜೆ ರಾಜನ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರ, ಸಹೋದರಿ ಮನೆಯಲ್ಲಿದ್ದರು. ಕೆಲ ಗಂಟೆಗಳ ಕಾಲ ಮನೆಯಲ್ಲಿ ಇರಲು ಅವಕಾಶ ನೀಡಿದ್ದು, ಸಂಜೆ ಮತ್ತೆ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಗುತ್ತೆ.

 

Related posts

Leave a Reply