Header Ads
Header Ads
Breaking News

ತಾಯಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಭೂಗತ ಪಾತಕಿ. ಬನ್ನಂಜೆ ರಾಜಾನಿಂದ ತಾಯಿಯ ಅಂತಿಮ ವಿಧಿ ವಿಧಾನ. ನಿಧನರಾಗಿದ್ದ ತಾಯಿಯ ಅಂತಿಮ ವಿಧಿ ವಿಧಾನಕ್ಕೆ ಕೋರ್ಟ್ ಒಪ್ಪಿಗೆ.

ಭೂಗತ ಪಾತಕಿ ಬನ್ನಂಜೆ ರಾಜನಿಗೆ ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಭಾಗ್ಯ ಲಭಿಸಿದೆ. ಇಪ್ಪತ್ತು ವರುಷಗಳ ನಂತ್ರ ಒಂದು ಬಾರಿ ತಾಯಿಯನ್ನು ನೋಡುವ ಅವಕಾಶ ಬನ್ನಂಜೆ ರಾಜನಿಗೆ ಸಿಕ್ಕಿತ್ತು. ಆದ್ರೆ ಮತ್ತೊಂದು ಭಾರಿ ತಾಯಿಯನ್ನು ಜೀವಂತವಾಗಿ ನೋಡೊ ಅವಕಾಶ ವಂಚಿತನಾದ ರಾಜಾನಿಗೆ ತಾಯಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುವುದಕ್ಕೆ ಕೊರ್ಟ್ ಅವಕಾಶ ನೀಡಿದೆ. ಕೊನೆಗೂ ಹಿಂಡಲಗಾ ಜೈಲಿನಲ್ಲಿ ವಿಚಾರಣಾ ಅಧೀನ ಖೈದಿಯಾಗಿದ್ದ ರಾಜಾ, ಪೊಲೀಸ್ ಸುಪರ್ದಿಯಲ್ಲೆ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ.ಹೌದು ಈತ ವಿದೇಶದಲ್ಲೇ ಕುಳಿತು ಕರಾವಳಿಯನ್ನು ನಡುಗಿಸಿದ ಭೂಗತ ಪಾತಕಿ ಬನ್ನಂಜೆ ರಾಜಾ. ಈತ ಮೂಲತಃ ಉಡುಪಿಯ ಕಲ್ಮಾಡಿಯಾತ. ಹರೆಯದಲ್ಲೇ ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡು ಅಂಡರ್‌ವಲ್ಡ್ ಡಾನ್ ಆಗಿ ಮೆರೆದು ಕೊನೆಗೂ ಪೊಲೀಸ್ ಅತಿಥಿಯಾದವನು ಬನ್ನಂಜೆ ರಾಜ. ಸದ್ಯ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ರಾಜ ಈಗ ಇಪ್ಪತ್ತು ವರುಷ ನಂತ್ರ ಎರಡನೇ ಬಾರಿಗೆ ಮತ್ತೊಮ್ಮೆ ಉಡುಪಿಗೆ ಅಗಮಿಸಿದ್ದಾನೆ. ಬನ್ನಂಜೆ ರಾಜ ಕಳೆದ ತಿಂಗಳಿನಲ್ಲಿ ಪರೋಲ್ ಮೇಲೆ ಉಡುಪಿಗೆ ಅಗಮಿಸಿ ಅನಾರೋಗ್ಯದಲ್ಲಿ ಇದ್ದ ತಾಯಿಯನ್ನು ನೋಡಿಹೋಗಿದ್ದ. ಆದ್ರೆ ತಾಯಿ ವಿಲಾಸಿನಿ ಶೆಟ್ಟಿಗಾರ್ ನಿಧನ ಹೊಂದಿದ ಹಿನ್ನೆಯಲ್ಲಿ ಮತ್ತೊಮ್ಮೆ ಉಡುಪಿಗೆ ಅಗಮಿಸಿದ್ದಾನೆ. ಹಲವರು ಬನ್ನಂಜೆ ರಾಜ ನೋಡುವ ಕುತೂಹಲದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ್ರು. ಬಿಗಿ ಪೋಲೀಸ್ ಬಂದೋಬಸ್ತ್‌ನಲ್ಲಿ ಮಲ್ಪೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

Related posts

Leave a Reply