Header Ads
Header Ads
Breaking News

ತಾಯ್‌ಲ್ಯಾಂಡ್ ಓಪನ್ ಗೋಲ್ಡ್ ಬ್ಯಾಡ್ಮಿಂಟನ್, ಭಾರತದ ಪ್ರಣೀತ್‌ಗೆ ಚೊಚ್ಚಲ ಗ್ರ್ಯಾಂಡ್ ಪ್ರಶಸ್ತಿ

ಆರಂಭಿಕ ಗೇಮ್ನಲ್ಲಿ ಹಿನ್ನಡೆ ಎದುರಾದರೂ ಛಲಬಿಡದೆ ಹೋಡಿದ ಭಾರತದ ಬಿ. ಸಾಯಿ ಪ್ರಣೀತ್ ಅವರು ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಹೋರಾಟದಲ್ಲಿ ಪ್ರಣೀತ್ ೧೭-೨೧, ೨೧-೧೮, ೨೧-೧೯ರಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರ ಸವಾಲು ಮೀರಿ ನಿಂತರು. ಈ ಮೂಲಕ ಭಾರತದ ಆಟಗಾರ ಗ್ರ್ಯಾಂಡ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದರು. ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಜೊನಾಥನ್ ಉತ್ತಮ ಆರಂಭ ಪಡೆದುಕೊಂಡರು. ಮೊದಲ ಗೇಮ್ನ ಶುರುವಿನಿಂದಲೇ ಚುರುಕಾಗಿ ಆಡಿದ ಅವರು ೩-೦ರ ಮುನ್ನಡೆ ಗಳಿಸಿದರು. ಮೂರನೇ?ಶ್ರೇಯಾಂಕಿತ ಆಟಗಾರ ಪ್ರಣೀತ್ ಇದರಿಂದ ವಿಶ್ವಾಸ ಕಳೆದುಕೊಳ್ಳಲಿಲ್ಲ. ಲಯ ಕಂಡು ಕೊಂಡು ಆಡಿದರು.
ವಿಶ್ವ ಕ್ರಮಾಂಕಪಟ್ಟಿಯಲ್ಲಿ ೨೪ನೇ ಸ್ಥಾನ ಹೊಂದಿರುವ ಪ್ರಣೀತ್ ಆರಂಭಿಕ ನಿರಾಸೆಯಿಂದ ಎದೆಗುಂದಲಿಲ್ಲ. ಎರಡನೇ ಗೇಮ್ನಲ್ಲಿ ಭಾರತದ ಆಟಗಾರ ತುಂಬು ವಿಶ್ವಾಸದಿಂದ ಹೋರಾಡಿದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಮೂರನೇ ಹಾಗೂ ನಿರ್ಣಾಯಕ ಗೇಮ್ ಕುತೂಹಲದ ಗಣಿ ಎನಿಸಿತ್ತು. ರೋಚಕ ಘಟ್ಟದಲ್ಲಿ ನಿರಾತಂಕವಾಗಿ ಆಡಿದ ಭಾರತದ ಆಟಗಾರ ಚುರುಕಾಗಿ ಎರಡು ಪಾಯಿಂಟ್ಸ್ ಕಲೆಹಾಕಿ ಗೆಲುವಿನ ತೋರಣ ಕಟ್ಟಿದರು.

Related posts

Leave a Reply