Header Ads
Breaking News

ತಾರಸಿಗೆ ತಾಗಿಕೊಂಡು ಹಾದುಹೋಗುತ್ತಿರುವ ವಿದ್ಯುತ್ ತಂತಿ : ತಾರಸಿಗೆ ತಾಗಿಕೊಂಡು ಹಾದುಹೋಗುತ್ತಿರುವ ವಿದ್ಯುತ್ ತಂತಿ

ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. 14 ನೇ ವಾರ್ಡು ಮೀನು ಕಾರ್ಮಿಕರ ಕೇಂದ್ರವಾಗಿರುವ ಬಂಗ್ರ ಮಂಜೇಶ್ವರ ಸೇತುವೆ ಹಾಗೂ ಲೀಗ್ ಕಚೇರಿಯ ಮುಂಭಾಗದಲ್ಲಿ ಕಾಡಿಯಾರ್ ಭಾಗಕ್ಕೆ ಹಾದು ಹೋಗುತ್ತಿರುವ ವಿದ್ಯುತ್ ತಂತಿಗಳು ಇದೇ ಪರಿಸರದಲ್ಲಿರುವ ಮೂರು ಮನೆಗಳ ಮೇಲ್ಬಾಗದ ತಾರಸಿಗೆ ಜೋತು ಬಿದ್ದು ತಂತಿಗಳು ಹಾದು ಹೋಗುತಿದ್ದರೂ ಈ ಬಗ್ಗೆ ಸ್ಥಳೀಯರು ಅಪಾಯದಂಚಿನಲ್ಲಿರುವ ವಿದ್ಯುತ್ ತಂತಿಯ ಬಗ್ಗೆ ಹಲವಾರು ಸಲ ವಿದ್ಯುತ್ ಅಧಿಕಾರಿಗಳ ಹಾಗೂ ಸಿಬ್ಬಂಧಿಗಳ ಗಮನಕ್ಕೆ ತಂದರೂ ಈ ಬಗ್ಗೆ ಕಿಂಚತ್ತೂ ಮುತುವರ್ಜಿವಹಿಸದ ವಿದ್ಯುತ್ ಇಲಾಖೆಯವರು ಕಂಡೂ ಕಾಣದ ಜಾಣ ಕುರುಡರಂತೆ ವರ್ತಿಸಿರುವುದಾಗಿ ಆರೋಪಿಸಲಾಗಿದೆ. ಸಂಬಂಧಪಟ್ಟವರು ದುರಂತ ಸಂಭವಿಸುವುದಕ್ಕಿಂತ ಮುಂಚಿತವಾಗಿ ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *