Header Ads
Breaking News

ಸುಳ್ಯತಾಲೂಕು ಮುಸ್ಲಿಂ ಹಿತರಕ್ಷಣಾ ವೇದಿಕೆಯ ವತಿಯಿಂದ ಎನ್.ಆರ್.ಸಿ ಮತ್ತು ಸಿ.ಎ.ಎ ವಿರುದ್ಧ ಬೃಹತ್ ಪ್ರತಿಭಟನೆ

ಇಡೀ ಜಗತ್ತಿನಲ್ಲೇ ನಾಯಕನಿಲ್ಲದೆ, ವ್ಯಕ್ತಿ ಮುಖವಿಲ್ಲದೆ ರಾಷ್ಟ್ರಧ್ವಜದ ಅಡಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಂವಿಧಾನದ ಪಥದಲ್ಲೇ ಇಂತಹ ಪ್ರತಿಭಟನೆ ನಡೆಸಿ ಫಲ ಪಡೆಯೋಣ ಎಂದು ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಹೇಳಿದರು.

ಅವರು ಮುಸ್ಲಿಂ ಹಿತರಕ್ಷಣಾ ವೇದಿಕೆ ಸುಳ್ಯ ತಾಲೂಕು ಇದರ ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತರಲು ಹೊರಟಿರುವ ಎನ್.ಆರ್.ಸಿ ಮತ್ತು ಸಿ.ಎ.ಎ ವಿರುದ್ದ ಸುಳ್ಯದ ಗಾಂಧಿನಗರದಲ್ಲಿ ನಡೆದ ಬೃಹತ್ ಪ್ರತಿಭಟನೆ ಮತ್ತು ಜನಂದೋಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಧರ್ಮಗಳ ನಡುವೆ ಗೋಡೆ ಕಟ್ಟುವವರು ದೇಶ ದ್ರೋಹಿಗಳು, ಸೇತುವೆ ಕಟ್ಟುವವರು ದೇಶಪ್ರೇಮಿಗಳು. ಅಹಿಂಸೆ ತತ್ವ ಮಾತ್ರ ದೇಶದ ಬಲಿಷ್ಠ ಶಸ್ತ್ರ.ಸಮಾಜದಲ್ಲಿ ವಿಷ ಬೀಜ ಬಿತ್ತುವವರ ಷಡ್ಯಂತ್ರ ಅರಿಯಬೇಕು ಎಂದು ಹೇಳಿದರು.

ಈ ಸಂದರ್ಭ ಬೆಂಗಳೂರಿನ ಸಾಮಾಜಿಕ ಹೋರಾಟಗಾರ, ದಲಿತ ಮುಖಂಡ ಭಾಸ್ಕರ್ ಪ್ರಸಾದ್, ಮುಸ್ಲಿಂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ದುಗಲಡ್ಕ ಮಸೀದಿ ಧರ್ಮಗುರು ಝೈನಲ್ ಅಬೀದಿನ್ ತಂಞಳ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಇನ್ನು ಮುಸ್ಲಿಂ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಬೆಂಬಲವಾಗಿ ಸುಳ್ಯದ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಮುಸ್ಲಿಂ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು. ಅಲ್ಲದೇ ಅಹಿತಕರ ಘಟನೆಗಳು ನಡೆಯದಂತೆ ಭಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು ಕೇರಳ ಸಂಪರ್ಕಿಸುವ ರಸ್ತೆಗಳಲ್ಲಿ ಪೋಲಿಸ್ ಚೆಕ್‍ಪೋಸ್ಟ್‍ಗಳನ್ನು ಮಾಡಿ ವಾಹನ ತಪಾಸಣೆ ನಡೆಸಿದರು.

Related posts

Leave a Reply

Your email address will not be published. Required fields are marked *