Header Ads
Header Ads
Breaking News

ತಾಳೆ ಬೆಳೆಗೆ ಉತ್ತೇಜನ ನೀಡುವ ಉದ್ದೇಶ: ಅ.12ರಂದು ದ.ಕ. ಜಿಲ್ಲಾ ಎಣ್ಣೆತಾಳೆ ಬೆಳೆಗಾರರ ಸಭೆ

ಪುತ್ತೂರು: ತಾಳೆ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಎಣ್ಣೆತಾಳೆ ಬೆಳೆಗಾರರ ಸಭೆಯು ಅ. 12ರಂದು ಪುತ್ತೂರು ರೋಟರಿ ಸಭಾಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ತಾಲೂಕು ಎಣ್ಣೆತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಆತಂಕ ಎದುರಾಗಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ಬೆಳೆಯಾಗಿ ತಾಳೆ ಕೃಷಿಯನ್ನು ಮಾಡುವುದರ ಕುರಿತು ಕೃಷಿಕರಿಗೆ ಮಾಹಿತಿ ನೀಡಲು ಈ ಸಭೆಯನ್ನು ಕರೆಯಲಾಗಿದೆ. ನಾವು ತಾಳೆ ಎಣ್ಣೆಯನ್ನು ಇಂಡೋನೇಷ್ಯಾ ಮತ್ತು ಮಲೇಷ್ಯಾಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ನಮ್ಮಲ್ಲಿಯೇ ಈ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬಹುದಾಗಿದೆ. ಇದು ಕೇಂದ್ರ ಕೇಂದ್ರ ಸರಕಾರದ ಮೂಲ ಯೋಜನೆಯಾಗಿದ್ದು, ಇದು ಸಾಕಷ್ಟು ಆದಾಯ ತರುವ ಬೆಳೆಯಾಗಿದೆ ಎಂದರು.ಸಭೆಯಲ್ಲಿ ಕಾಸರಗೋಡು ಸಿಪಿಸಿಆರ್‌ಐನ ತೋಟದ ಬೆಳೆಗಳ ಪ್ರಯೋಜನ ಸಂಯೋಜಕ ಡಾ. ಎಚ್.ಸಿ. ಮಹೇಶ್ವರಪ್ಪ, ಪುತ್ತೂರು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಮಂಗಳೂರು ತೋಟಗಾರಿಕಾ ಉಪನಿರ್ದೇಶಕರು ಹಾಗೂ ೩ಎಫ್ ಕಂಪೆನಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕೃಷ್ಣಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ತಾಳೆ ಬೆಳೆಗಾರರ ಸಂಘದ ಕಾರ್ಯದರ್ಶಿ ಅವಿನಾಶ್ ಜೈನ್ ಉಪಸ್ಥಿತರಿದ್ದರು.

Related posts

Leave a Reply