Breaking News

ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಏಶಿಯನ್ ಬಾಕ್ಸಿಂಗ್, ಗೈರಾದ ವಿಕಾಸ್‌ಗೆ ಕಂಚು, ಶಿವ ಥಾಪಾ ಪೈನಲ್‌ಗೆ

ಭಾರತದ ಶಿವ ಥಾಪಾ ಹಾಗೂ ಸುಮಿತ್ ಸಂಗ್ವಾನ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಶುಕ್ರವಾರ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ವಿಕಾಸ್ ಕೃಷ್ಣನ್ ಕಂಚು ಎತ್ತಿ ಹಿಡಿದಿದ್ದಾರೆ.
೬೦ ಕೆಜಿ ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಶಿವ ಥಾಪಾ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದುಕೊಂಡಿದ್ದ ಅಗ್ರಶ್ರೇಯಾಂಕದ ಮಂಗೋಲಿಯಾದ ಬಾಕ್ಸರ್ ದಫರ್ ಕಮುಬುಗ್ ಒಗೊಂದಲೈ ಅವರಿಗೆ ಆಘಾತ ನೀಡಿದರು. ಆರಂಭದಲ್ಲಿ ಎದುರಾಳಿಗೆ ಸುಲಭದಲ್ಲಿ ಪಾಯಿಂಟ್ಸ್ ಬಿಟ್ಟುಕೊಟ್ಟ ಶಿವ ಥಾಪಾ ಬಳಿಕ ಚೇತರಿಸಿಕೊಂಡು ಆಡಿದರು. ಪಂದ್ಯದ ಮೊದಲ ಮೂರು ನಿಮಿಷ ಇಬ್ಬರು ಬಾಕ್ಸರ್ಗಳು ಪಂಚ್ ಮಾಡಲು ಹಿಂದೇಟು ಹಾಕುತ್ತಿದ್ದರು. ಆದ್ದರಿಂದ ಮೊದಲ ಸುತ್ತು ನೀರಸವಾಗಿತ್ತು. ಆದರೆ ಎರಡನೇ ಸುತ್ತಿನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿತು. ಮೂರನೇ ಸುತ್ತಿನಲ್ಲಿ ಮಂಗೋಲಿಯಾದ ಆಟಗಾರ ಕೆಲವು ಪ್ರಬಲ ಪಂಚ್ಗಳಿಂದ ಚಪ್ಪಾಳೆ ಗಿಟ್ಟಿಸಿದರು. ಆದರೆ ಶಿವಥಾಪಾ ನಿಖರ ಹೊಡೆತಗಳಿಂದ ಗಮನ ಸೆಳೆದರು. ಪ್ರಶಸ್ತಿಗಾಗಿ ಶಿವ ಥಾಪಾ ಉಜ್ಬೇಕಿಸ್ತಾನದ ಎಲ್ನರ್ ಅಬ್ದುರೈಮೊವ್ ಎದುರು ಸೆಣಸಲಿದ್ದಾರೆ. ಎಲ್ನರ್ ತಮ್ಮ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಜುನ್ ಶಾನ್ ಅವರನ್ನು ಮಣಿಸಿದ್ದಾರೆ.
೯೧ ಕೆಜಿ ವಿಭಾಗದಲ್ಲಿ ಸುಮಿತ್ ಎರಡನೇ ಶ್ರೇಯಾಂಕದ ತಜಿಕ್ ಜಾಕನ್ ಕ್ವಿರ್ಬೊನೊವ್ ವಿರುದ್ಧ ಗೆದ್ದರು. ಭಾರತದ ವಿಕಾಸ್ ಕೃಷ್ಣನ್ ಪುರುಷರ ೭೫ ಕೆಜಿ ಮಿಡ್ಲ್ವೇಟ್ ವಿಭಾಗದ ಸೆಮಿಫೈನಲ್ ಪಂದ್ಯದ ವೇಳೆ ಹಾಜರಿರಲಿಲ್ಲ. ಇದರಿಂದಾಗಿ ಅವರು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ವಿಕಾಸ್ ಕೃಷ್ಣನ್ ಅವರಿಗೆ ವಿವರಣೆ ನೀಡುವಂತೆ ಭಾರತ ಬಾಕ್ಸಿಂಗ್ ಸಂಸ್ಥೆ ಹೇಳಿದೆ. ವಿಕಾಸ್ ೭೫ ಕೆಜಿ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದರು. ವಿಕಾಸ್ ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದಾರೆ. ೨೦೧೦ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದಾರೆ.

Related posts

Leave a Reply