Header Ads
Header Ads
Breaking News

ತಿರಂಗ ಟ್ರಸ್ಟ್ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ವತಿಯಿಂದ ರಕ್ತದಾನ ಶಿಬಿರ

ಮಂಗಳೂರಿನ ತಿರಂಗ ಟ್ರಸ್ಟ್ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ವತಿಯಿಂದ ಪ್ರಥಮ ವರ್ಷದ ರಕ್ತದಾನ ಶಿಬಿರವನ್ನು ನಗರದ ಕೊಡಿಯಾಲ್‌ಬೈಲ್ ಶಾರದಾ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಇನ್ನೂ ಹಲವಾರು ಮಂದಿ ಶಿಬಿರಾರ್ಥಿಗಳು ರಕ್ತದಾನದಲ್ಲಿ ಭಾಗವಹಿಸಿದ್ದರು.


 ಮಂಗಳೂರಿನ ಕೊಡಿಯಾಲ್‌ಬೈಲ್ ಶಾರದಾ ಕಾಲೇಜಿನ ಸಭಾಂಗಣದಲ್ಲಿ ತಿರಂಗ ಟ್ರಸ್ಟ್ ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ವತಿಯಿಂದ ಪ್ರಥಮ ವರ್ಷದ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಕಾರ್ಯಕ್ರಮವನ್ನು ಕೆಎಂಸಿ ಯುನಿಟ್ ಹೆಡ್ ಮತ್ತು ಪ್ರೋಫೆಸರ್ ಡಾ| ಮೊಹಮ್ಮದ್ ಇಸ್ಮಾಯಿಲ್ ಅವರು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ರಕ್ತದಾನ ಶಿಬಿರದಲ್ಲಿ ಯುವ ಸಮುದಾಯ ಪಾಲ್ಗೊಳ್ಳಬೇಕು.ರಕ್ತದಾನದಿಂದ ಮತ್ತೊಬ್ಬರ ಜೀವವನ್ನು ಉಳಿಸಿಕೊಳ್ಳಲು ಸಾಧ್ಯ ಅಂತಾ ಹೇಳಿದರು.

ಇದೇ ಸಂದರ್ಭದಲ್ಲಿ ತಿರಂಗಾ ಟ್ರಸ್ಟ್‌ನ ಟ್ರಸ್ಟಿ ಎಂ.ಪಾರ್ವತಿ ಮುದ್ರಾಜೆ ಅವರನ್ನು ಸನ್ಮಾನಿಸಲಾಯ್ತು. ಸನ್ಮಾನ ಸ್ವೀಕಾರಿಸಿ ಮಾತನಾಡಿದ ಅವರು, ಸಮಾಜ ಸೇವೆಗೆ ಪೂರಕವಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕು. ರಕ್ತದಾನ ಕೂಡ ಒಂದು ಸಮಾಜಸೇವೆ ಅಂತಾ ಹೇಳಿದರು.

ಈ ವೇಳೆ ಜಿಲ್ಲಾ ವಕ್ತಾರರಾದ ಜಿತೇಂದ್ರ ಕೊಟ್ಟಾರಿ , ಲೀಡ್ಸ್‌ಗ್ರೂಪ್ ಮಾಲಕರಾದ ಲಯನ್ ಕಿಶೋರ್ ಡಿ.ಶೆಟ್ಟಿ , ನ್ಯಾಯವಾದಿ ಮತ್ತು ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್, ಡಾ| ಸುಜೀತ್ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.ಇದೇ ವೇಳೆ ಹಲವಾರು ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply