Header Ads
Header Ads
Breaking News

ತಿಲಕ ಹಾಕದೆ ಇರೋದು ಹಿಂದೂಗಳು ಅಲ್ವಾ : ಮಂಗಳೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ತಿಲಕ ಹಾಕಿರುವ ವ್ಯಕ್ತಿಗಳನ್ನು ಕಂಡರೆ ಭಯ ಎಂಬ ಬಿಜೆಪಿಗರ ಹೇಳಿಕೆಗೆ ಮಂಗಳೂರಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕುಂಕುವ ಹಾಕದೆ ಇರೋರು ಹಿಂದೂಗಳು ಅಲ್ವಾ, ತಿಲಕ ಹಾಕಿದವರು ಮಾತ್ರ ಹಿಂದೂಗಳಾ ಎಂದು ಪ್ರಶ್ನಿಸಿದರು. ಇನ್ನು ಬಿಜೆಪಿ ಆರೋಪಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು. ಹಿಂದೂಗಳು ಎಲ್ಲರೂ ತಿಲಕ ಹಾಕಿಕೊಳ್ಳಲ್ಲ. ನಾನು ತಿಲಕ ಹಾಕಿಲ್ಲ. ನಾನು ಹಿಂದೂ ಅಲ್ವಾ ಎಂದು ಹೇಳಿದರು.

ಇನ್ನು ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ಕೇಳಿದರೆ ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಬಿಟ್ಟುಕೊಡಬೇಕೆಂದು ಕೇಳುತ್ತಿದ್ದಾರೆ,. ಈ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದು ಹೇಳಿದರು.

ಉಮೇಶ್ ಜಾಧವ್ ಅವರು ಸ್ಪೀಕರ್‌ಗೆ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ಉಮೇಶ್ ಜಾಧವ್ ಅವರು ಈಗಾಲೂ ಕಾಂಗ್ರೆಸ್ ಶಾಸಕ. ಅವರು ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಒಂದು ವೇಳೆ ಭಾಗವಹಿಸಿದರೆ ನಾವೂ ಶಾಸಕರ ಅನರ್ಹತೆಗೆ ನೀಡಿರುವ ದೂರಿಗೆ ಮತ್ತಷ್ಟು ಬಲ ಬರಲಿದೆ ಎಂದು ತಿಳಿಸಿದರು .

Related posts

Leave a Reply

Your email address will not be published. Required fields are marked *