Header Ads
Breaking News

ತೀರ್ಥ ಸ್ನಾನಕ್ಕೆ ಇಳಿದ ಭಕ್ತರೊಬ್ಬರು ಮಧ್ವಸರೋವರದಲ್ಲಿ ಮುಳುಗಿ ಸಾವು

ತೀರ್ಥಸ್ನಾನಕ್ಕೆ ಇಳಿದ ಕೃಷ್ಣಭಕ್ತರೊಬ್ಬರು ಮಧ್ವಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಡುಪಿ ಕೃಷ್ಣಮಠದಲ್ಲಿ ಇಂದು ಮುಂಜಾನೆ ದುರ್ಘಟನೆ ನಡೆದಿದೆ.ಚೆನ್ನೈ ಮೂಲದ 62ವರ್ಷದ ಕ್ಯಾಪ್ಟನ್ ಜಿ ಶ್ರೀಧರನ್ ಮೃತ ದುರ್ದೈವಿ. ಕೃಷ್ಣ ನ ದರ್ಶನ ಪಡೆಯಲು ಬಂದಿದ್ದ ಇವರು ಮಧ್ವ ಸರೋವರದಲ್ಲಿ ತೀರ್ಥಸ್ನಾನಕ್ಕೆ ಇಳಿದಿದ್ದಾರೆ. ಸರೋವರ ಆಳವಿದ್ದ ಕಾರಣ ಈಜಲು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *