Breaking News

ತೀವ್ರ ಜಿದ್ದಾಜಿದ್ದಿನ ಪುರುಷ ಕಾಂಪೌಂಡ್ ಆರ್ಚರಿ, ಅಮೆರಿಕ ತಂಡ ಮಣಿಸಿ ಭಾರತ ಫೈನಲ್ಲಿಗೆ

ಭಾರತದ ಪುರುಷರ ತಂಡ ಶಾಂಘೈ ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ನಲ್ಲಿ ಫೈನಲ್ಗೆ ಲಗ್ಗೆಯಿಟ್ಟದೆ.
ಪುರುಷರ ಕಾಂಪೌಂಡ್ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮಾ, ಚಿನ್ನರಾಜು ಶ್ರೀಧರ್, ಅಮನ್ಜಿತ್ ಸಿಂಗ್ ಇದ್ದರು. ಸೆಮಿಫೈನಲ್ನಲ್ಲಿ ಈ ತಂಡ ಅಮೆರಿಕಾವನ್ನು ಮಣಿಸಿದೆ. ಅಮೆರಿಕದ ತಂಡದಲ್ಲಿ ಸ್ಟೀವ್ ಆ್ಯಂಡರ್ಸನ್, ಬ್ರಾಡನ್ ಗೆಲ್ಲೆನ್ತಿನ್, ರಿಯೊ ವೀಲ್ಡ್ ಇದ್ದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪೈಪೋಟಿಯಲ್ಲಿ ಭಾರತ ೨೩೨-೨೩೦ ಪಾಯಿಂಟ್ಸ್ಗಳಲ್ಲಿ ಗೆದ್ದಿದೆ. ಮೊದಲ ಎರಡು ಸೆಟ್ಗಳ ಬಳಿಕ ಭಾರತ ೧೧೬-೧೧೭ರಲ್ಲಿ ಒಂದು ಪಾಯಿಂಟ್ನಿಂದ ಹಿಂದೆ ಉಳಿದಿತ್ತು. ಆದರೆ ಮೂರನೇ ಸೆಟ್ನಲ್ಲಿ ತಿರುಗೇಟು ನೀಡಿತು. ೬೦-೫೭ರಲ್ಲಿ ಪೈಪೋಟಿ ನೀಡಿತು. ನಿರ್ಣಾಯಕ ಸುತ್ತಿನಲ್ಲಿ ಭಾರತ ಎದುರಾಳಿ ತಂಡದಿಂದ ತೀವ್ರ ಪೈಪೋಟಿ ಎದುರಿಸಿತು. ಆದರೆ ಕೂದಲೆಳೆಯ ಅಂತರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.
ನಾಲ್ಕನೇ?ಶ್ರೇಯಾಂಕದ ಭಾರತ ತಂಡ ಫೈನಲ್ನಲ್ಲಿ ಹತ್ತನೇ?ಶ್ರೇಯಾಂಕದ ಕೊಲಂಬಿಯಾ ವಿರುದ್ಧ ಶನಿವಾರ ಆಡಲಿದೆ. ಮಿಶ್ರ ಜೋಡಿ ವಿಭಾಗದಲ್ಲಿ ವರ್ಮಾ ಹಾಗೂ ಜ್ಯೋತಿ ಸುರೇಖಾ ಅವರು ಸೆಮಿಫೈನಲ್ನಲ್ಲಿ ಸೋಲು ಕಂಡು ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇ ಆಫ್ ಪಂದ್ಯದಲ್ಲಿ ಆಡಲಿದ್ದಾರೆ. ಭಾರತ ಉಳಿದ ವಿಭಾಗಗಳಲ್ಲಿ ಸೋಲು ಕಂಡಿದೆ.

Related posts

Leave a Reply