Header Ads
Breaking News

ಬ್ರಹ್ಮರಕೂಟ್ಲುವಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ತುಂಬೆ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

ಬಂಟ್ವಾಳ: ತಲೆಯಲ್ಲಿ ಕಾಗದದಿಂದ ತಯಾರಿಸಿದ ರಾಜಾ ಕಿರೀಟ.. ಕೈಯಲ್ಲಿ ಗಿರ್‌ಗಿಟ್… ಶಾಲಾ ಮೈದಾನದಲ್ಲಿ ಮಕ್ಕಳು ಗಿರಗಿರನೆ ತಿರುಗಿಸುತ್ತಾ ಓಡುತ್ತಿದ್ದರೆ ಹಬ್ಬದ ಸಂಭ್ರಮ. ಅದನ್ನು ನೋಡುತ್ತಾ ನಿಂತಿದ್ದ ಶಿಕ್ಷಕರಿಗೆ, ಹಿರಿಯರಿಗೆ ತಮ್ಮ ಬಾಲ್ಯ ಜೀವನ ಮರುಕಳಿಸಿದಂತಾಯಿತು… ಈ ದೃಶ್ಯ ಕಂಡು ಬಂದಿದ್ದು ಬ್ರಹ್ಮರಕೂಟ್ಲುವಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ.. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಇದೇ ಮೊದಲ ಬಾರಿಗೆ ಆರಂಭಗೊಂಡ ತುಂಬೆ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಚಾಲನೆ ನೀಡಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಕಲಿಯ ಬೇಕು, ಕಲಿತು ಅದನ್ನು ಮರೆಯದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶುಭಹಾರೈಸಿದರು. ಸಂಘದ ಅಧ್ಯಕ್ಷ ದಿವಾಕರ ಪಂಬಂದಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಿಆರ್‌ಪಿ ನಂದಾ ಎಸ್ತೇರಾ, ಸಹಶಿಕ್ಷಕಿ ಭಾರತಿ ಶೇಷಪ್ಪ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *