Header Ads
Header Ads
Breaking News

ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ಥರಿಗೆ ಹಣ ಮಂಜೂರು

ಬಂಟ್ವಾಳ: ರಮಾನಾಥ ರೈ ಅವರು ಸಚಿವರಾಗಿದ್ದಾಗ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ 17 ಕೋಟಿ ರೂಪಾಯಿ ಮಂಜೂರುಗೊಂಡಿತ್ತು. ಭೂಮಿಯ ದಾಖಲೆಪತ್ರ ಸರಿಯಾಗಿ ಒದಗಿಸಿದವರಿಗೆ ಪರಿಹಾರ ದೊರಕಿದೆ. ಆದರೆ ಇದೀಗ ಮತ್ತೆ ಪರಿಹಾರ ಸಿಕ್ಕಿಲ್ಲ ಎಂಬ ಮನವಿಗಳು ಬರುತ್ತಿದ್ದು, ಇದು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ಮನವಿಗಳು ಸಲ್ಲಿಕೆ ಆಗುತ್ತಿವೆ. ಬಿಜೆಪಿ ಸರಕಾರ ಇದ್ದಾಗ ಡ್ಯಾಂಗೆ ಶಂಕುಸ್ಥಾಪನೆ ಆಗಿತ್ತು. ಪ್ರಾರಂಭಿಸುವ ಸಂದರ್ಭ ಕೃಷಿಕರ ಭೂಮಿ ಮುಳುಗಡೆ ಕುರಿತು ಗಮನ ಕೊಡದಿರುವುದೇ ಸಮಸ್ಯೆಗೆ ಕಾರಣ ಎಂದು ಹೇಳಿದರು.ರಮಾನಾಥ ರೈ ಮಂತ್ರಿಯಾಗಿದ್ದಾಗ ಸರಕಾರಕ್ಕೆ ಪರಿಹಾರ ದೊರಕಿಸುವಂತೆ ಒತ್ತಾಯ ಹೇರಲಾಗಿತ್ತು. ಈ ಸಂದರ್ಭ ರೈ ನೇತೃತ್ವದಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆದಿತ್ತು. 5 ಮೀ ಮುಳುಗಡೆ ರೈತರಿಗೆ ಮೊದಲ ಹಂತ, ೬ ಮೀ. ಮುಳುಗಡೆ ರೈತರಿಗೆ ಎರಡನೇ ಹಂತದಲ್ಲಿ ಪರಿಹಾರ ದೊರಕಿಸುವ ಕುರಿತು ಮಾತುಕತೆ ನಡೆಯಿತು. ಮೊದಲ ಹಂತದಲ್ಲಿ7 ಕೋಟಿ ರೂ ಬಳಿಕ 10 ಕೋಟಿ ರೂ ಮಂಜೂರಾಗಿತ್ತು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಯೂಸುಫ್ ಕರಂದಾಡಿ, ಮಧುಸೂಧನ ಶೆಣೈ, ಜಗದೀಶ ಕುಂದರ್, ಲೋಲಾಕ್ಷ ಶೆಟ್ಟಿ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

 

Related posts

Leave a Reply