Header Ads
Header Ads
Breaking News

ತುಮಿನಾಡು ಕುಂಜತ್ತೂರು ದೈವಗಳ ವಾರ್ಷಿಕ ನೇಮೋತ್ಸವ : ತಂತ್ರಿವರ್ಯ ಮರಿಭಟ್ಟರ ಮುಂದಾಳತ್ವದಲ್ಲಿ ಕಾರ್ಯಕ್ರಮ

ಮಂಜೇಶ್ವರ: ಬ್ರಹ್ಮ ಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ತೂಮಿನಾಡು ಕುಂಜತ್ತೂರು ದೈವಗಳ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಕೆ ಮರಿಭಟ್ಟರ ಮುಂದಾಳತ್ವದಲ್ಲಿ ಆರಂಭಗೊಂಡಿತು.

ಇಂದು ಬೆಳಿಗ್ಗೆ ಗಣಹೋಮದ ಬಳಿಕ ಕೊಡಿ ಮುಹೂರ್ತ, ದುರ್ಗಾ ಪೂಜೆ ಮತ್ತು ಕುಂಕುಮಾರ್ಚನೆ ಬಳಿಕ ಮಹಾ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು.ಅದೇ ರೀತಿ ಮದ್ಯಾಹ್ನದ ಅನ್ನ ಸಂತರ್ಪಣೆಯ ಬಳಿಕ ಕೊಡಮಂದಾಯ ನೇಮ , ತಾಲೀಮು ಪ್ರದರ್ಶನ ಹಾಗೂ ರಾತ್ರಿಯಿಂದ ಬೆಳಿಗ್ಗೆ ತನಕ ಶ್ರೀ ಮಹಾಕಾಳಿ ನೇಮೋತ್ಸವ ನಡೆಯಲಿದೆ.ಭಾನುವಾರ ಬೆಳಿಗ್ಗೆ ಗಂಧ ಪ್ರಸಾದ ಸ್ವೀಕಾರ, ಧರ್ಮ ದೈವ ಗುಳಿಗ ನೇಮ, ಪಂಜುರ್ಲಿ ನೇಮ, ಹಾಗೂ ಬ್ರಹ್ಮ ಶ್ರೀ ಹಾಗೂ ತನ್ನಿಮಾನಿಗ ದೈವಗಳ ನೇಮ ನಡೆಯಲಿದೆ.ಸಮಾಪ್ತಿ ದಿನವಾದ ಸೋಮವಾರ ದೈವಗಳಿಂದ ಗಂಧ ಪ್ರಸಾದ ಸ್ವೀಕಾರ ಹಾಗೂ ಭಂಡಾರವನ್ನು ಇಳಿಸಿ ಕುರಿ ತಂಬಿಲ ಪ್ರಸಾದದೊಂದಿಗೆ ಮೂರು ದಿನಗಳಲ್ಲಿ ನಡೆದ ಅದ್ದೂರಿ ನೇಮೋತ್ಸವ ಸಮಾಪ್ತಿಯಾಗಲಿದೆ.

Related posts

Leave a Reply

Your email address will not be published. Required fields are marked *