Header Ads
Header Ads
Breaking News

ತುಳುಕೂಟದ ವತಿಯಿಂದ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ ಕಾರ್ಯಕ್ರಮ

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ಒಳಾಂಗಣ ಸ್ಪರ್ಧೆ ಮತ್ತು ಒಡಿಯೂರ್‍ದ ತುಳುಕೂಟದ ವತಿಯಿಂದ ಆಟಿದ ಆಯನೊ ಕಾರ್ಯಕ್ರಮ ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ನಡೆಯಿತು. 44 ತಿಂಡಿತಿನಸುಗಳನ್ನು ತಯಾರಿಸಿದ ಸುಗುಣ, 15 ತಿಂಡಿಗಳನ್ನು ತಯಾರಿಸಿದ ರೇಖಾ,14ತಿಂಡಿಗಳನ್ನು ತಯಾರಿಸಿದ ವನಮಾಲಾ ಮೇಲಂಟ ಅವರನ್ನು ಶ್ರೀಗಳು ಪುರಸ್ಕರಿಸಿದರು. ಆಟಿ ತಿಂಗಳಿನ ವಿಶಿಷ್ಟ ತಿಂಡಿ-ತಿನಿಸುಗಳ ಪ್ರದರ್ಶನ ನಡೆಯಿತು. ಆಟಿ ಕಳೆಂಜದ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಜಾನಪದ ಆರಾಧನಾ ಕಲೆಗಳಿಗೆ ಧಕ್ಕೆಯಾಗದಂತೆ, ಅವಹೇಳನ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ತುಳುವರಿಗಿದೆ. ಅಂತಹ ಸಂದರ್ಭದಲ್ಲಿ ಪ್ರತಿಭಟಿಸುವ, ಖಂಡಿಸುವ ಧೈರ್ಯ ತೋರಬೇಕು ಎಂದು ಹೇಳಿದರು.
ಸಾಧ್ವೀ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ಒಡಿಯೂರು ತುಳುಕೂಟದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಅಳಪೆ ಕರ್ಮಾರ್ ಸತ್ಸಂಗ ಸಮಿತಿ ಅಧ್ಯಕ್ಷ ವಾಸುದೇವ ಆರ್.ಕೊಟ್ಟಾರಿ, ಒಡಿಯೂರು ತುಳುಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಒಡಿಯೂರು, ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಮಂಗಳೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ಒಡಿಯೂರು ಗುರುದೇವ ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಯಶವಂತ ವಿಟ್ಲ, ಸನ್ಮಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply