Header Ads
Breaking News

ತುಳುನಾಡಿನಲ್ಲಿ ಆಟಿ ಅಮವಾಸ್ಯೆ. ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಪಾಲೆ ಕಷಾಯ.

ಇಂದು ತುಳುನಾಡಿನಲ್ಲಿ ಎಲ್ಲೆಡೆ ಆಟಿ ಅಮವಾಸ್ಯೆ ಆಚರಿಸುತ್ತಿದ್ದಾರೆ. ಆ ಪ್ರಯುಕ್ತ ಇಂದು ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪಾಲೆ ಕಷಾಯವನ್ನು ವಿತರಿಸಲಾಯಿತು.ಹೌದು, ಇಂದು ಆಟಿ ಅಮವಾಸ್ಯೆ. ಆ ಪ್ರಯುಕ್ತ ಮಂಗಳೂರಿನ ವೆಲೆನ್ಸಿಯ ಸಿಲ್ವ ಕ್ರಾಸಿನಲ್ಲಿರುವ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪಾಳೆಯ ಮರದ ಕೆತ್ತೆಯ ಕಷಾಯವನ್ನು ವಿತರಿಸಲಾಯಿತು.

ನಂತರ ಆಸ್ಪತ್ರೆಯ ಡಾ. ಸಚಿನ್ ನಡ್ಕ ಮಾತನಾಡಿ, ತುಳುನಾಡಿನ ಸಂಸ್ಕೃತಿಯಂತೆ ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ಪಾಲೆಯ ಕಷಾಯವನ್ನು ಕುಡಿಯಬೇಕು. ಖಂಡಿತವಾಗಿಯು ಕಷಾಯವನ್ನು ಕುಡಿಯುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.ಆಟಿ ಅಮವಾಸ್ಯೆಯ ದಿನ ತುಳುನಾಡಿನಲ್ಲಿ ಪ್ರತಿಯೊಬ್ಬರು ಪಾಲೆ ಕಷಾಯ ಹಾಗೂ ಮೆಂತೆ ಗಂಜಿ ಸೇವಿಸುವುದು ವಾಟಿಕೆ. ಇದರ ಅರ್ಥ ನಮ್ಮ ಜೀವನದಲ್ಲಿ ಮೊದಲು ಕಹಿಯನ್ನು ಸ್ವೀಕಾರ ಮಾಡಿ ಮುಂದಿನ ನಮ್ಮ ಜೀವನ ಸಿಹಿಯನ್ನಾಗಿವುದು.

Related posts

Leave a Reply