Header Ads
Breaking News

ತುಳುನಾಡಿನಾದ್ಯಂತ ಆಟಿ ಅಮಾವಾಸ್ಯೆಯ ಸಂಭ್ರಮ

ಇಂದು ತುಳುನಾಡಿನಾದ್ಯಂತ ಆಟಿ ಅಮಾವಾಸ್ಯೆಯ ಸಡಗರ ಸಂಭ್ರಮ.. ಇಂದು ಹಾಲೆ ಮರಕ್ಕೆ ಎಲ್ಲಿಲ್ಲದ ಡಿಮ್ಯಾಂಡ್ ಹೌದು…ರೋಗ ನಿರೋಧಕ ಶಕ್ತಿ ಕೊಡುವ ಹಾಲೆ ಮರದ ತೊಗಟೆಯ ಕಷಾಯವನ್ನು ಈ ದಿನ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಕರಾವಳಿಯಲ್ಲಿದೆ. ಹಾಗಾದ್ರೆ ಹಾಲೆ ಮರದ ತೊಗಟೆಯ ಕಷಾಯ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ..? ಆಟಿ ಅಮಾವಾಸ್ಯೆಯ ವಿಶೇಷತೆ ಏನು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..

ಪರಶುರಾಮ ಸೃಷ್ಟಿ ನಮ್ಮೀ ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಬಂತೆಂದ್ರೆ ಅದೇನೋ ಸಂಭ್ರಮ.. ಈ ದಿನ ಹಾಲೆ ಮರದ ತೊಗಟೆಯಕಷಾಯವನ್ನು ಈ ದಿನ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ತುಳುವರಲ್ಲಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಶ್ರದ್ದಾಳುಗಳು ಹಾಲೆ ಮರದ ಬಳಿ ಜಮಾಯಿಸಿದ ದೃಶ್ಯ ಕಂಡುಬಂತು. ಆಯುರ್ವೇದದಲ್ಲಿ ಸಪ್ತಪರ್ಣ ಎಂದು ಕರೆಸಿಕೊಳ್ಳುವ ಹಾಲೆ ಮರ, ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೀಗಾಗಿ ಆಟಿ ಅಮವಾಸ್ಯೆ ದಿನ ಈ ಮರದ ತೊಗಟೆಯ ಕಷಾಯ ಸೇವಿಸುವುದು ಕರಾವಳಿಯಲ್ಲಿ ನಡೆದುಕೊಂಡು ಬಂದಿದೆ. ಆಟಿ ಕಳಂಜ ದೈವ ಅಮವಾಸ್ಯೆಯಂದು ಅನೇಕ ಔಷಧಿ ಗುಣಗಳನ್ನು ತಂದು ಮರದಲ್ಲಿ ಇರಿಸುತ್ತದೆ ಎಂಬ ನಂಬಿಕೆ ತುಳುವರಲ್ಲಿದೆ. ಈ ಮರದ ರಸ ತುಂಬಾ ಕಹಿಯಾಗಿದ್ದು, ಯಾರು ಇದನ್ನು ನಂಬಿಕೆಯಿಂದ ಸೇವಿಸುತ್ತಾರೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ.

ತೊಗಟೆಯನ್ನು ನೀರು ಮಿಶ್ರ ಮಾಡಿ ಜಜ್ಜಿ ಅದರಿಂದ ರಸ ತೆಗೆಯಲಾಗುತ್ತದೆ. ಕೆಲವರು ಈ ರಸವನ್ನು ಹೀಗೇ ಕುಡಿದರೆ ಇನ್ನೂ ಕೆಲವರು ಹಾಲೆ ರಸಕ್ಕೆ ಜೀರಿಗೆ, ಬೆಳ್ಳುಳ್ಳಿ, ಅರಿಶಿನ ಮಿಶ್ರ ಮಾಡಿ ಕುಡಿಯುತ್ತಾರೆ. ಹಾಲೆ ರಸಕ್ಕೆ ವ್ಯಾಧಿಕ್ಷಮತ್ವ ಹೆಚ್ಚಿಸುವ ಗುಣ, ವೈರಾಣು ನಿರೋಧಕ, ಕ್ಯಾನ್ಸರ್ ಗಡ್ಡೆ ಗಾತ್ರ ಕಡಿಮೆ ಮಾಡುವ ಗುಣ, ಅತಿಸಾರ ನಿರೋಧಕ, ಜ್ವರತಾಪ ಕಡಿಮೆ ಮಾಡುವ ಗುಣ ಸಹಿತ ಅನೇಕ ಪ್ರಯೋಜನಗಳಿವೆ ಎಂಬುದು ವೈಜ್ಞಾನಿಕವಾಗಿಯೂ ಧೃಡಪಟ್ಟಿದೆ.

ಇಷ್ಟೇ ಅಲ್ಲದೆ ಔಷಧೀಯ ಗುಣವುಳ್ಳ ಆಟಿ ಕಷಾಯವನ್ನು ಸೇವಿಸಿ ಮೆಂತೆ ಗಂಜಿ ಸವಿಯುವ ಪದ್ಧತೆ ಕೂಡಾ ತುಳುನಾಡಿನಲ್ಲಿ ಹಿಂದಿನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ.
ಒಟ್ಟಾರೆ ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಅನ್ನುವಂತದ್ದು ಒಂದು ವಿಶೇಷ ರೀತಿಯ ರೀತಿಯ ಆಚರಣೆಯಾಗಿದ್ದು, ತುಳುವರು ಈ ಬಗ್ಗೆ ತಮ್ಮದೇ ಆದ ನಂಬಿಕೆಯನ್ನು ಹೊಂದಿದ್ದಾರೆ.

Related posts

Leave a Reply

Your email address will not be published. Required fields are marked *