Breaking News

ತುಳುನಾಡಿನ ಶಿಮಂತೂರು ತನ್ನಿಮಾನಿಗ ದೈವ, ಮೂರ್ತಿ ಅಲುಗಾಡಿದ ವಿಡಿಯೋ ವೈರಲ್

ತುಳುನಾಡಿನ ದೈವವೊಂದರ ಮೂರ್ತಿ ತನ್ನಷ್ಟಕ್ಕೇ ಅಲುಗಾಡಿದ ಮೊಬೈಲ್ ವಿಡಿಯೋ ಒಂದು ಇದೀಗ ದೈವಗಳ ಕಾರ್ಣಿಕ ಎಂದು ವೈರಲ್ ಆಗಿದೆ.
ಮುಲ್ಕಿ ಸಮೀಪದ ಶಿಮಂತೂರು ಕೋಡ್ದಬ್ಬು ದೈವಸ್ಥಾನದಲ್ಲಿ ಇತ್ತೀಚಿಗೆ ವಾರ್ಷಿಕ ಜಾತ್ರೋತ್ಸವ ನಡೆದಿತ್ತು. ಜಾತ್ರೆಯ ದಿನ ಭಂಡಾರ ಇಳಿಯುವ ಸಂದರ್ಭ, ದೈವಗಳಿಗೆ ಸಂಬಂಧಪಟ್ಟ ಮೂರ್ತಿಗಳು ಹಾಗೂ ಇತರೆ ಚಿನ್ನಾಭರಣಗಳನ್ನು ದೈವಸ್ಥಾನದ ಹೊರಗೆ ಜೋಡಿಸಲಾಗುತ್ತದೆ. ಇದೇ ರೀತಿ ಮೂರ್ತಿಗಳನ್ನು ನಿಗದಿತ ಜಾಗದಲ್ಲಿ ಇಟ್ಟ ಬಳಿಕ ತನ್ನಿಮಾನಿಗ ಅನ್ನುವ ದೈವದ ಮೂರ್ತಿ ತನ್ನಷ್ಟಕ್ಕೇ ಅಲುಗಾಡಿದಂತಾಗಿದ್ದು ಇದು ಮೊಬೈಲ್‌ನಲ್ಲಿ ಚಿತ್ರೀಕರಣಗೊಂಡಿದೆ. ಈ ದೈವದ ಮೂರ್ತಿಯನ್ನು ಹಲಗೆಯ ಮೇಲೆ ಇಡುವ ಸಂದರ್ಭ ಸರಿಯಾಗಿ ಇಡದಿದ್ದು ಬಳಿಕ ದೈವವೇ ತನ್ನ ಕಾರ್ಣಿಕದ ಮೂಲಕ ಸರಿಯಾಗಿ ನಿಂತಿದೆ ಅನ್ನುವ ಸುದ್ದಿ ವ್ಯಾಪಕವಾಗಿ ಹರಡಿದೆ. ಇದೀಗ ಈ ವಿಡಿಯೋ ನೋಡಿ ತನ್ನಿಮಾನಿಗ ದೈವದ ಕಾರ್ಣಿಕ ಎಂಬುದು ಭಕ್ತ ಜನರು ಹೇಳುತಿದ್ದಾರೆ.

Related posts

Leave a Reply