Header Ads
Header Ads
Breaking News

ತುಳುನಾಡ್ ಸ್ವತಂತ್ರ ಪಕ್ಷ ಚುನಾವಣಾ ಕಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿದ್ಯಾಶ್ರೀ ಎಸ್ ತುಳುನಾಡ ರಾಜ್ಯದ ಗುರಿಯೊಂದಿಗೆ ಜಿಲ್ಲೆಯಲ್ಲಿ ಕಣಕ್ಕೆ

ಪುತ್ತೂರು: ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ತುಳು ಧರ್ಮ ಉಳಿವಿಗಾಗಿ ಮತ್ತು ತುಳುನಾಡ ರಾಜ್ಯದ ಗುರಿಯೊಂದಿಗೆ ತುಳುನಾಡ್ ಸ್ವತಂತ್ರ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಪಡುಮಲೆಯ ಪುತ್ರಿ ಉಳ್ಳಾಲ ಧರ್ಮನಗರ ನಿವಾಸಿ ವಿದ್ಯಾಶ್ರೀ ಎಸ್ ಚುನಾವಣೆ ಎದುರಿಸಲಿದ್ದಾರೆ ಎಂದು ತುಳುನಾಡ್ ಸ್ವತಂತ್ರ ಪಕ್ಷದ ಸ್ಥಾಪಕ್ಷದ ಅಧ್ಯಕ್ಷ ಶೈಲೇಶ್ ತಿಳಿಸಿದ್ದಾರೆ.ರಾಷ್ಟ್ರೀಯ ಪಕ್ಷಗಳು ತುಳು ಭಾಷೆಗೆ ಸ್ಥಾನಮಾನ ನೀಡುವಲ್ಲಿ ವಿಫಲವಾಗಿದೆ. ಎತ್ತಿನಹೊಳೆ ಯೋಜನೆಯನ್ನು ಅದೇ ಪಕ್ಷಗಳು ಅನುಮೋದನೆ ನೀಡಿ ಪ್ರತಿಭಟನೆ ನಾಟಕವಾಡುತ್ತಿದೆ. ತುಳುನಾಡಿನಲ್ಲಿರುವ ರಾಷ್ಟ್ರೀಯ ಪಕ್ಷಗಳು ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಶ್ರೀಮಂತ ತುಳುನಾಡಿನ ಸಂಪನ್ಮೂಲವನ್ನು ತುಳುನಾಡಿನ ಪ್ರಗತಿಗೆ ವಿನಿಯೋಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈಗಾಗಲೇ ಕಾರ್ಕಾಳದಿಂದ ಸುಮಂತ್ ಕೆ ಪೂಜಾರಿ ಎಂಬ ಅಭ್ಯಾರ್ಥಿಯನ್ನು ಘೋಷಿಸಲಾಗಿದೆ. ಪುತ್ತೂರಿನಿಂದ ಮಹಿಳಾ ಅಭ್ಯಾರ್ಥಿಯಾಗಿ ವಿದ್ಯಾಶ್ರೀ ಎಸ್‌ರವರು ಸ್ಪರ್ಧಿಸಲಿದ್ದಾರೆ. ಸುಮಾರು ಐದಾರು ವರ್ಷಗಳ ಹಿಂದೆಯೂ ತುಳುನಾಡು ಪಕ್ಷ ಸ್ಥಾಪನೆಗೆ ಚರ್ಚಿಸಲಾಗುತ್ತಿತ್ತು. ಇದರ ಬೆಳವಣಿಗೆ ಪ್ರಸ್ತುತ ದಿನದಲ್ಲಿ ಸ್ಪರ್ಧೆಗೆ ಇಳಿದಿದ್ದೇವೆ. ಮುಂದಿನ ಕೆಲವೇ ದಿನಗಳಲ್ಲಿ ಬೆಳ್ತಂಗಡಿ, ಸುರತ್ಕಲ್ ಸೇರಿದಂತೆ ಹಲವು ದ.ಕ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯಾರ್ಥಿಗಳನ್ನು ಘೋಷಿಸಲಾಗಿವುದು ಎಂದು ಅವರು ಹೇಳಿದರು.
ವರದಿ: ಅನೀಶ್ ಪುತ್ತೂರು