Header Ads
Header Ads
Breaking News

ತುಳುನಾಡ ಗೊಬ್ಬಲು ಗ್ರಾಮೀಣ ಕ್ರೀಡೆ ರಾಜೇಶ್ ನಾಯಕ್‌ರಿಂದ ಕಾರ್ಯಕ್ರಮ ಉದ್ಘಾಟನೆ

 

ಸೌತ್ ಕೆನರಾ ಪೊಟೋಗ್ರಾಫ್‌ರ್‍ಸ್ ಅಸೋಸಿಯೇಶನ್ ದ.ಕ-ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ವತಿಯಿಂದ ಒಡ್ಡೂರು ಫಾರ್ಮ ಹೌಸ್ ನಲ್ಲಿ ನೆಡದ ತುಳುನಾಡ ಗೊಬ್ಬಲು ಗ್ರಾಮೀಣ ಕ್ರೀಡೆ ನಡೆಯಿತು.ಕಾರ್‍ಯಕ್ರಮವನ್ನು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು .ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯ ದೇವದಾಸ ಶೆಟ್ಟಿ , ಮಂಗಳೂರು ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ , ಜಿಲ್ಲಾ ಗೌರವಾಧ್ಯಕ್ಷ ಆನಂದ , ಕಾರ್ಯದರ್ಶಿ ಮಧು ಮಂಗಳೂರು, ಮತ್ತಿತರು ಉಪಸ್ಥಿತರಿದ್ದರು

ಸುಳ್ಯದಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ಕುರಿತು ಸಮಾಲೋಚನಾ ಸಭೆ
ಸ್ವಚ್ಛ ಊರುಗಳ ಘೋಷಣೆಯಾಗಲಿ
ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಹೇಳಿಕೆ

ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಲ್ಲೇ ಹೆಚ್ಚು ಸ್ವಚ್ಛ ಎಂದು ಹೆಸರುವಾಸಿ. ಆದರೆ ಸ್ವಚ್ಛತೆ ನಮ್ಮ ಮನೆಯೊಳಗೆ ಮಾತ್ರ. ಕಸಗಳೆಲ್ಲಾ ಬೀದಿಯಲ್ಲಿರುತ್ತದೆ. ಹೀಗಾಗಬಾರದು, ಮಾಧ್ಯಮದ ಬೆಂಬಲದೊಂದಿಗೆ ನಾವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ . ಪ್ರತಿಯೊಬ್ಬರೂ ಸ್ವಚ್ಛತಾ ಊರಿನ ಘೋಷಣೆ ಮಾಡುವಂತಾಗಲಿ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ತಿಳಿಸಿದರು.ಅವರು ದ.ಕ.ಜಿ.ಪಂ. ಮಂಗಳೂರು , ಸ್ವಚ್ಛ ಭಾರತ್ ಮಿಷನ್, ತಾ.ಪಂ. ಸುಳ್ಯ, ಸುದ್ದಿ ಬಿಡುಗಡೆ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಇದರ ಸಹಯೋಗದಲ್ಲಿ ಸ್ವಚ್ಛತಾ ನೀತಿ-೨೦೧೭ರಂತೆ ಶಾಲಾ ಮಕ್ಕಳಿಗೆ ಸ್ವಚ್ಛತಾ ಜಾಗೃತಿ ಮಾಹಿತಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ,. ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ. ಯು.ಪಿ. ಶಿವಾನಂದ, ದ.ಕ.ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಜಿ.ಪಂ. ಸದಸ್ಯರುಗಳಾದ ಎಸ್.ಎನ್.ಮನ್ಮಥ, ಮತ್ತಿತರು ಉಪಸ್ಥಿತರಿದ್ದರು
ವರದಿ: ಪದ್ಮಾನಾಭ ಸುಳ್ಯ

Related posts

Leave a Reply