Header Ads
Header Ads
Breaking News

ತುಳುನಾಡ ರಕ್ಷಣಾ ವೇದಿಕೆಯ ವೆಬ್‌ಸೈಟ್ ಲೋಕಾರ್ಪಣೆ

ತುಳುನಾಡ ರಕ್ಷಣಾ ವೇದಿಕೆಯ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮವು ನಗರದ ಉರ್ವಸ್ಟೋರ್‌ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಬಂಡಾರಿ ತುಳುನಾಡ ರಕ್ಷಣಾ ವೇದಿಕೆಯು ಸದಾ ತುಳುವರ ಮತ್ತು ತುಳುನಾಡ ರಕ್ಷಣೆ ಮಾಡುತ್ತಲೇ ಬಂದಿದೆ ಈಗ ವೆಬ್‌ಸೈಟ್‌ನ ಮೂಲಕ ದೇಶದ ಮತ್ತು ಪ್ರಪಂಚದಾದ್ಯಂತ ಇರುವ ತುಳುವರ ರಕ್ಷಣೆಗೆ ಮತ್ತು ಅವರ ಸಮಸ್ಯಗೆ ಸ್ಪಂದಿಸಲು ಮುಂದಾಗಿ ಎಂದು ಹೊಸದಾಗಿ ಲೋಕಾರ್ಪಣೆಗೊಂಡ ವೆಬ್‌ಸೈಟ್‌ಗೆ ಮತ್ತು ತುಳುನಾಡ ರಕ್ಷಣಾ ವೇದಿಕೆಗೆ ಶುಭಹಾರೈಸಿದರು.

   

ನಂತರ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೊಗೀಶ್ ಶೆಟ್ಟಿ ಜೆಪ್ಪು ನಾವು ಯಾವದೇ ಪಲಾಪೇಕ್ಷೆ ಬಯಸದೆ ತುಳುನಾಡಿನ ಮತ್ತು ತುಳುವರ ರಕ್ಷಣೆ ಮಾಡುತ್ತ ಸಾಗಿ ಈಗ ದಶಮ ಸಂಭ್ರಮದ ಹೊಸ್ತಿಲಲ್ಲಿದ್ದೇವೆ ಇದು ನಮಗೆ ಸಂತಸದ ಮತ್ತು ಹೆಮ್ಮೆಯ ವಿಚಾರ ಮತ್ತು ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ ಈ ಹಿನ್ನಲೆಯಲ್ಲಿ ವೆಬ್‌ಸೈಟ್ ರೂಪಿಸಿದ್ದೇವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪೊಲೀಸ್ ಕ್ರೈಮ್ ಬ್ರಾಂಚ್‌ನ ಅಧಿಕಾರಿ ಶಾಂತರಾಮ್, ಅಖಿಲ ಭಾರತ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಿಟ್ಟೆ ಶಶಿದರ್ ಶೆಟ್ಟಿ, ವಿದೂಷಿ ಸೌಮ್ಯ ಸುದೀಂದ್ರ ರಾವ್,ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply