Header Ads
Header Ads
Breaking News

ತುಳುನಾಡ ರಕ್ಷಣಾ ವೇದಿಕೆ(ರಿ) ಇದರ ದಶಮಾನೋತ್ಸವದ ಅಂಗವಾಗಿ “ತೌಳವೋತ್ಸವ”

ತುಳುನಾಡ ರಕ್ಷಣಾ ವೇದಿಕೆ(ರಿ) ಇದರ ದಶಮಾನೋತ್ಸವದ ಅಂಗವಾಗಿ ’ತೌಳವೋತ್ಸವ’ವು ಡಿಸಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಕಾಸರಗೋಡು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಮತ್ತು ’ತೌಳವೋತ್ಸವ’ದ ಪ್ರಧಾನ ಸಂಯೋಜಕರಾದ ಭಾಸ್ಕರ್ ಕಾಸರಗೋಡು ಹೇಳಿದರು.ಇವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ ಉಡುಪಿ ಜಿಲ್ಲೆಯ ಬಾರ್ಕೋರಿನಿಂದ ಕಾಸರಗೋಡಿನ ವರೆಗಿನ ಪ್ರದೇಶ ಜಗತ್ತಿನಾಧ್ಯಂತ ತುಳುನಾಡಾಗಿ ಖ್ಯಾತಿ ಪಡೆದಿದೆ. ಇದು ಕಲೆ,ಸಂಸ್ಕೃತಿ,ಆಚಾರ ವಿಚಾರಗಳಿಗೆ ಹೆಸರಾದ ನಾಡು, ನಮ್ಮ ಸಂಸ್ಕೃತಿಯನ್ನು ತೆರೆದಿಡುವ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ(ರಿ) ಇದರ ದಶಮಾನೋತ್ಸವದ ಅಂಗವಾಗಿ ’ತೌಳವೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.ಈ ಸಂದರ್ಭ ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಈ ಸಂದರ್ಭ ತುಳುನಾಡ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ತುಳುನಾಡ ರಕ್ಷಣಾ ವೇದಿಕೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಜೋತಿಕಾ ಜೈನ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply