Header Ads
Breaking News

ತುಳುನಾಡ ಸಂಜೀವಿನಿ ಸಂಸ್ಥೆ ವತಿಯಿಂದ ದೈನಂದಿನ ಆಹಾರ ಸಾಮಾಗ್ರಿ ವಿತರಣೆ

ಮೂಡುಬಿದಿರೆ : ತುಳುನಾಡ ಸಂಜೀವಿನಿ ಸಂಸ್ಥೆಯ ವತಿಯಿಂದ ಮೂಡುಬಿದಿರೆ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ಆರು ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ತುಳುನಾಡ ಸಂಜೀವಿನಿ ಸಂಸ್ಥೆಯ ಸ್ಥಾಪಕ ಮಹೇಂದ್ರ ಕಾಶಿ ಸಹಿತ ಪದಾಧಿಕಾರಿಗಳು ಆಹಾರ ಸಾಮಾಗ್ರಿಗಳನ್ನು ಶಾಲೆಗೆ ವಿತರಿಸಿದರು. ನಂತರ ಮಾತನಾಡಿದ ಮಹೇಂದ್ರ ಕಾಶಿ ಅವರು ಸರ್ಕಾರಿ ಸೌಲಭ್ಯ ವಂಚಿತ ಸಂಘ ಸಂಸ್ಥೆಗಳಿಗೆ ದೈನಂದಿನ ಸಾಮಾಗ್ರಿ ಕೊಡುವ ಕೆಲಸ ನಮ್ಮ ಸಂಸ್ಥೆ ಮಾಡುತ್ತಿದೆ. ಭಿನ್ನ ಸಾಮರ್ಥ್ಯದ ಮಕ್ಕಳ ಬದುಕು ರೂಪಿಸುವುದು ಸಾಮಾನ್ಯ ಕೆಲಸವಲ್ಲ. ಅಂತಹ ಕೆಲಸವನ್ನು ಸ್ಫೂರ್ತಿ ಶಾಲೆ ಮಾಡುತ್ತಿರುವುದು ಆದರ್ಶ ಹಾಗೂ ಪುಣ್ಯದ ಕೆಲಸ ಎಂದರು.

ಸ್ಫೂರ್ತಿ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಮಾತನಾಡಿ ಸಾಮಾಜಿಕ ತಾಣಗಳ ದುರ್ಬಳಕೆಯಾಗುತ್ತಿರುವ ಈ ಸಂದರ್ಭದಲ್ಲಿ, ಅದನ್ನು ಬಳಸಿ ಸಮಾಜಸೇವೆಯನ್ನು ಮಾಡುತ್ತಿರುವ ತುಳುನಾಡ ಸಂಜೀವಿನಿ ಬಳಗದ ಸೇವೆ ಅನನ್ಯ ಎಂದರು.

ತುಳುನಾಡ ಸಂಜೀವಿನಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಕಾರ್‌ಸ್ಟ್ರೀಟ್, ಕಾರ್ಯದರ್ಶಿ ಮಹೇಶ್ ಉಪ್ಪಿನಂಗಡಿ, ಸಂಸ್ಥೆಯ ಸ್ಥಾಪಕ ಪ್ರಮುಖರಾದ ರಾಹುಲ್ ಮಂಗಳೂರು, ದೇವಿ ಪ್ರಸಾದ್ ವಾಮಂಜೂರು, ವಿಕಾಸ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *