Header Ads
Breaking News

ತುಳುನಾಡ ಸೇನೆಯಿಂದ 2ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ತುಳುನಾಡ ಸೇನೆ ಮೂಡುಬಿದಿರೆ ಆಶ್ರಯದಲ್ಲಿ ಭಗತ್‍ಸೇನೆ ಮೂಡುಬಿದಿರೆ ಸಹಕಾರದೊಂದಿಗೆ ಮೂಡುಬಿದಿರೆ ಪದ್ಮಾವತಿ ಕಲ್ಯಾಣಮಂಟಪದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಐದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮೂಡುಬಿದರೆಯ ತುಳುನಾಡ ಸೇನೆ ಆಶ್ರಯದಲ್ಲಿ 2ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಕಾರ್ಯಕ್ರಮಕ್ಕೆ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿಯವರು ಆಗಮಿಸಿ ಆಶೀರ್ವಚನ ನೀಡಿ ಉತ್ತುಂಗ ಬದುಕಿನ ನಿರ್ವಹಣೆ, ಅತ್ಯಂತ ಜವಾಬ್ದಾರಿಯುತ ಜೀವನವಾದ ಗ್ರಹಾಸ್ಥಾಶ್ರಮದಲ್ಲಿ ತನ್ನ ಕುಟುಂಬಕ್ಕೆ ವಿನಿಯೋಗ ಮಾಡಬೇಕೆಂದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸಮಾರಂಭವನ್ನು ಉದ್ಘಾಟಿಸಿ, ತಂದೆ, ತಾಯಿಗೆ ಗೌರವವನ್ನು ಮುಂದಿಟ್ಟು ಸಮಾಜಸೇವೆ ಮಾಡುವಂತಹ ಗುಣವನ್ನು ಹೊಂದಿರುವ ಸುರೇಶ್ ಶೆಟ್ಟಿ. ಶ್ರಮಜೀವಿಯಾಗಿ ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಸಮಾಜಸೇವೆಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ. ಇದೊಂದು ಮಾದರಿ ಕೆಲಸ ಎಂದರು.

ಉದ್ಯಮಿ ಕೆ.ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು, ಬ್ಲಾಕ್ ಯುವ ಕಾಂಗ್ರೆಸ್ ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಚಂದ್ರಹಾಸ ಸನಿಲ್, ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಯಾದವ ಶೆಟ್ಟಿ, ಸಾಯಿ ಪೂಂಜ ಮುಂಬೈ, ಮಾಜಿ ಮೇಯರ್ ಮಿಜಾರುಗುತ್ತಉ ಶಶಿಧರ್ ಹೆಗ್ಡೆ, ತೋಡಾರು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಂ, ಮೂಡುಬಿದಿರೆ-ಮೂಲ್ಕಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಹಾಜಿ, ವಿವೇಕ್, ಮುಖ್ಯ ಅತಿಥಿಯಾಗಿದ್ದರು.

ಸನ್ಮಾನ: ನಿವೃತ್ತ ಸೈನಿಕ ರಾಜೇಂದ್ರಜೀ, ಮೂಡುಬಿದಿರೆ ಸ್ಫೂರ್ತಿ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಹಾಗೂ ಬಂಟ್ವಾಳ ಮೇರಮಜಲು ಶ್ರೀಮಾತಾ ಲಕ್ಷಣೆ ಶಾಂತಿಧಾಮದ ಸ್ಥಾಪಕ ಕಾಂತಾಡಿಗುತ್ತು ಹರೀಶ್ ಪೆರ್ಗಡೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಥ್ಲೆಟಿಕ್ಸ್‍ನಲ್ಲಿ ಅಂತಾರಾಷ್ಟ್ರೀಯ ಸಾಧನೆ ಮಾಡಿದ ಕರಣ್ ಅವರ ಪರವಾಗಿ ತಂದೆ ವಿವೇಕ್ ಸನ್ಮಾನ ಸ್ವೀಕರಿಸಿದರು.

ತುಳುನಾಡ ಸೇನೆ ಸ್ಥಾಪಕಾಧ್ಯಕ್ಷ ಸುರೇಶ್ ಶೆಟ್ಟಿ, ಅಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ಭಗತಸೇನೆಯ ಸ್ಥಾಪಕ ಅಧ್ಯಕ್ಷ ಸುಜಿತ್ ಶೆಟ್ಟಿ, ಅಧ್ಯಕ್ಷ ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಬೆದ್ರ, ಸಂದೀಪ್ ಎಂ.ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ಆಚಾರ್ಯ, ಎರಡೂ ಸಂಘಟನೆಯ ಪದಾಧಿಕಾರಿಗಳು, ವಧು-ವರರ ಕುಟುಂಬದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *