Header Ads
Breaking News

ತುಳುನಾಡ ಸ್ವಾತಂತ್ರ್ಯ ನೆನಪು ಕಾರ್ಯಕ್ರಮ

ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ತುಳುನಾಡ ಸ್ವಾತಂತ್ರ್ಯ ನೆನಪು ಕಾರ್ಯಕ್ರಮ ಮಂಗಳೂರು ಬಾವುಟ ಗುಡ್ಡೆಯಲ್ಲಿ ನಡೆಯಿತು. ಈ ವೇಳೆ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಹಿಂಸೆಯ, ಹಿಂಸೆಯ, ತೀವ್ರಗಾಮಿತ್ವದ ಕಲ್ಪನೆಯಡಿಯಲ್ಲಿ ದೇಶಕ್ಕೋಸ್ಕರ, ಸ್ವತಂತ್ರ ಭಾರತಕ್ಕೋಸ್ಕರ ಅದೆಷ್ಟೋ ಜನ ತನ್ನ ಆತ್ಮ ಬಲಿದಾನಗೈದು ನಮ್ಮ ದೇಶಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ಆದರೆ ಅದಕ್ಕಿಂತ ಹಿಂದೆಯೇ ಸ್ವಾತಂತ್ರ್ಯದ ಬಗೆಗೆ ಕೆಚ್ಚೆದೆಯಿಂದ ಹೋರಾಡಿಪೊರ್ಚುಗೀಸರನ್ನು ಓಡಿಸಿದ ವೀರರಾಣಿ ಅಬ್ಬಕ್ಕರನ್ನು ಇಲ್ಲಿ ನೆನಪಿಸಬೇಕಾಗಿದೆ. ಸ್ವಾತಂತ್ರ್ಯ ಚರಿತ್ರೆಯ ಪುಟಗಳಲ್ಲಿ ಚೌಟ ರಾಣಿ ಉಳ್ಳಾಲದ ಅಬ್ಬಕ್ಕನ ಹೆಸರು ಎಲ್ಲೂ ಕಾಣಸಿಗದಿರುವುದು ಬೇಸರದ ಸಂಗತಿ ಎಂದ್ರು. ಅಂತೆಯೇ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮೊದಲೇ ನಮ್ಮ ತುಳುನಾಡಿನಲ್ಲಿ ಅಂದರೆ, ಸ್ವಾತಂತ್ರ್ಯ ಲಭಿಸುವ ಸುಮಾರು 110 ವರ್ಷಗಳ ಹಿಂದೆ ಸ್ವಾತಂತ್ರ್ಯ ಧ್ವಜವನ್ನು ಎಪ್ರಿಲ್ 5, 1837ಕ್ಕೆ ಮಂಗಳೂರಿನ ಬಾವುಟಗುಡ್ಡದಲ್ಲಿ ಹಾರಿಸಿದವರು ತುಳು-ಕನ್ನಡಿಗರು. ಈ ವಿಚಾರ ಸ್ವಾತಂತ್ರ್ಯದ ಚರಿತ್ರೆಯ ಪುಟಗಳಲ್ಲಿ ಕಾಣಸಿಗುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *