Header Ads
Header Ads
Breaking News

ತುಳು ನಾಟಕ ಪರ್ಬದ ಸಮಾರೋಪ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾದ ಎಂಟು ದಿನಗಳ ತುಳು ನಾಟಕ ಪರ್ಬದ ಸಮಾರೋಪ ಕಂಡಿತು.

ಇನ್ನು ಸಮಾರೋಪ ಸಮಾರಂಭದ ದಲ್ಲಿ ಲಚ್ಚು ನಾಟಕದ ಮೂಲ ಕರ್ತೃ ಎನ್.ಗೋಪಾಲಕೃಷ್ಣ ಬೆಂಗಳೂರು ಮಾತನಾಡಿ, ತುಳು ನಾಟಕಗಳ ಅಧ್ಯಯನ ಮತ್ತು ಮಿಮರ್ಶೆ ನಡೆಯಬೇಕು.ನಾಟಕ ಪ್ರದರ್ಶನದಿಂದ ಸಮಾಜದಕ್ಕಾದ ಪರಿಣಾಮಗಳ ಬಗ್ಗೆ ಅವಲೋಕಿಸಬೇಕಿದೆ ಎಂದು ಹೇಳಿದರು.
ಈ ವೇಳೆ ಉಪನ್ಯಾಸಕ ಡಾ.ಶಿವರಾಮ ಶೆಟ್ಟಿ ಬೋಳಾರ, ಹಿರಿಯ ರಂಗಭೂಮಿ ಕಲಾವಿದ ಸದಾನಂದ ಸುವರ್ಣ, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮತ್ತಿತರರು ಉಪಸ್ಥಿತರಿದ್ದರು.